HomePage_Banner
HomePage_Banner
HomePage_Banner
HomePage_Banner

ಸವಣೂರು ವಿವೇಕಾನಂದ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿವೇಕಾನಂದರ ಆದರ್ಶಗಳು, ವಿವೇಕ ವಾಣಿ ಸರ್ವ ಕಾಲಿಕರಾಜೇಶ್ವರಿ ಕೆ


ಸವಣೂರು : ಸ್ವಾಮಿ ವಿವೇಕಾನಂದರ ಮಾತೃಭೂಮಿಯ ಮೇಲಿನ ಪ್ರೇಮ,ಗೌರವಯುವ ವಿಚಾರಧಾರೆಗಳು ನಮಗೆ ಆದರ್ಶ,ಜತೆಗೆ ಜನತೆಯನ್ನು ಬಡಿದೆಬ್ಬಿಸುವ ಅವರ ಮೌಲ್ಯಯುತವಾಗಿರುವ ವಾಣಿಗಳು ಸರ್ವಕಾಲಿಕ ಎಂದು ಕಡಬ ತಾ.ಪಂ.ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಹೇಳಿದರು.

ಅವರು ಜ.೧೨ರಂದು ಸಂಜೆ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ದ.ಕ.ಜಿಲ್ಲಾಡಳಿತ ,ದ.ಕ.ಜಿ.ಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಯುವ ಸ್ಪಂದನ ಕೇಂದ್ರ ಮಂಗಳೂರು,ನೆಹರು ಯುವ ಕೇಂದ್ರ ಮಂಗಳೂರು ,ದ.ಕ.ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು,ಸವಣೂರು ಯುವಕ ಮಂಡಲ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಖಂಡ ಭಾರತದ ಕಲ್ಪನೆಗೆ ಮಾದರಿ ಸ್ವಾಮಿ ವಿವೇಕಾನಂದರು. ಜಗತ್ತಿನ ಮುಖದಲ್ಲಿ ಭಾರತ ದಡ್ಡ ದೇಶವಲ್ಲ, ಬಹಳ ದೊಡ್ಡ ದೇಶ ಎಂದು ಸಾರಿದವರು. ಮಾತ್ರವಲ್ಲದೆ ಭಾರತ ಜಗತ್ತಿನ ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವೆಂದು ಸಾರಿದವರು ಅವರು. ಅವರ ಚಿಂತನೆಗಳು ಸದಾ ಪ್ರಸ್ತುತ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ,ವಿವೇಕಾನಂದರು ದೇಶಕ್ಕೆ ಸಿಕ್ಕ ಗುರುತರವಾದ ಗುರುಶಕ್ತಿಗಳಲ್ಲೊಬ್ಬರು. ಹೆಜ್ಜೆ ಹೆಜ್ಜೆಗೂ ಈ ದೇಶವನ್ನು ಅವಮಾನಿಸುತ್ತಿರುವ ರಾಷ್ಟ್ರವೇ ಇಲ್ಲಿಯ ಮಂದಿಗೆ ಮಾದರಿಯಾಗಿ ಕಾಣಿಸುವಾಗ, ದೇಸೀಯ ಚಿಂತನೆಗಳು ಮರೆಯಾಗಿ ವಿದೇಶೀಯತೆ ಆಪ್ಯಾಯಮಾನವಾಗುತ್ತಿರುವಾಗ ವಿವೇಕಾನಂದರ ವಿಚಾರಗಳು ಅತೀವ ಅಗತ್ಯವೆನಿಸಿವೆ. ಸ್ವಾತಂತ್ರ್ಯ ಹೋರಾಟಕ್ಕೊಂದು ಸ್ಪಷ್ಟ ದಿಕ್ಕು ತೋರಿದವರು ವಿವೇಕಾನಂದರು. ಇಲ್ಲಿನ ಜನ ಪಾಶ್ಚಿಮಾತ್ಯ ವಿಕತಿಯೆಡೆಗೆ ಕೊಚ್ಚಿಹೋಗುತ್ತಿದ್ದಾಗ ಎಲ್ಲರನ್ನೂ ದೇಸೀಯತೆಗೆಡೆಗೆ ಸೆಳೆದ ಮಹಾನ್ ಸಂತ ಅವರು. ದಾಸ್ಯದ ಸಂದರ್ಭದಲ್ಲಿ ಯುವಕರಿಗೊಂದು ನೂತನ ಚೈತನ್ಯ ನೀಡಿದ ಸಂತ ವಿವೇಕಾನಂದರು ಎಂದರು.

ಯುವ ಸ್ಪಂದನ ಕೇಂದ್ರದ ಸಂಯೋಜಕ ಶ್ರೀಕಾಂತ್ ಪೂಜಾರಿ ಬಿರಾವು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಗಿರಿಶಂಕರ ಸುಲಾಯ,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು,ಪ್ರಗತಿಪರ ಕೃಷಿಕ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ಮಂಜುನಾಥನಗರ ಶ್ರೀಗೌರಿ ಯುವತಿ ಮಂಡಲದ ಗೌರವಾಧ್ಯಕ್ಷೆ ಇಂದಿರಾ ಬಿ.ಕೆ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಟ್ಟಿ,ಕಾರ್ಯಕ್ರಮ ಸಂಯೋಜಕ ಸತೀಶ್ ಬಲ್ಯಾಯ ಉಪಸ್ಥಿತರಿದ್ದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ,ಸವಣೂರು ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕುದ್ಮಾರು ವಂದಿಸಿದರು.ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹೇಶ್ ಕೆ.ಸವಣೂರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.