HomePage_Banner
HomePage_Banner
HomePage_Banner
HomePage_Banner

ಜ.30,31: ಸರ್ವೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಸನ್-6 | ಎಸ್.ಜಿ.ಎಂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು ಆಟಗಾರರ ಹರಾಜು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-೬ ಕ್ರಿಕೆಟ್ ಪಂದ್ಯಾಟ ೨೦೨೧ ಜ.೩೦ ಮತ್ತು 31ರಂದು ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಜ.12ರಂದು ಸಂಜೆ ಸರ್ವೆ ಭಕ್ತಕೋಡಿ ಎಸ್.ಜಿ.ಎಂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಎಸ್.ಪಿ.ಎಲ್ ಪಂದ್ಯಾಟದ ಸಂಸ್ಥಾಪಕರು, ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷರೂ ಆಗಿರುವ ಕೆ.ಎಂ ಹನೀಫ್ ರೆಂಜಲಾಡಿ ಅವರು ಬಿಡ್ಡಿಂಗ್ ಪ್ರಕ್ರಿಯೆ ನಡೆಸಿಕೊಟ್ಟರು. 8 ಫ್ರಾಂಚೈಸಿ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳ ಮಾಲಕರು/ಐಕಾನ್ ಆಟಗಾರರು ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದರು.

ಟ್ರೋಫಿ ಫೈಟರ್‍ಸ್ ದರ್ಬೆ, ರೆಡ್‌ಗೈಸ್ ರೆಂಜಲಾಡಿ, ಸೊರಕೆ ಸ್ಟ್ರೈಕರ್‍ಸ್, ರೆಡ್ಕೋ ರೈಡರ್‍ಸ್ ಕೂಡುರಸ್ತೆ, ಸನ್‌ರೇ ವಾರಿಯರ್‍ಸ್, ಬಡಕ್ಕೋಡಿ ಕ್ಯಾಪಿಟಲ್ಸ್, ಕಹಾನಿ ಫ್ರೆಂಡ್ಸ್ ರೆಂಜಲಾಡಿ, ಬ್ಲಾಸ್ಟರ್‍ಸ್ ಕೂಡುರಸ್ತೆ ಮುಂತಾದ ಎಂಟು ತಂಡಗಳ ಮಾಲೀಕರು ಬಿಡ್ಡಿಂಗ್ ಮೂಲಕ ತಮ್ಮ ತಂಡಕ್ಕೆ ಆಟಗಾರರನ್ನು ಪಡೆದುಕೊಂಡರು.

ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಅವರ ಪ್ರತಿಭೆಗೆ ಪ್ರೋತ್ಸಾಹ ಕೊಡುವುದು ಹಾಗೂ ಗ್ರಾಮದಲ್ಲಿ ಸೌಹಾರ್ದ ವಾತಾವರಣವನ್ನು ಗಟ್ಟಿಗೊಳಿಸುವುದೇ ಈ ಪಂದ್ಯಾಕೂಟದ ಉದ್ದೇಶವಾಗಿದೆ ಎಂದು ಎಸ್.ಪಿ.ಎಲ್ ಮುಖ್ಯ ಆಯೋಜಕರಾಗಿರುವ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದರು.

ಎಸ್.ಜಿ.ಎಂ ಪ್ರೌಢ ಶಾಲೆಯ ಶಿಕ್ಷಕ ವಿಜಯ ಕುಮಾರ್ ಉಪಸ್ಥಿತರಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಶಾಫಿ ಸೊರಕೆ, ಲಿಂಗಪ್ಪ ಸೊರಕೆ, ಮಜೀದ್ ರೆಂಜಲಾಡಿ, ಅಬ್ದುಲ್ ಹಕ್ ರೆಂಜಲಾಡಿ, ಹಾರಿಸ್ ಕೂಡುರಸ್ತೆ, ಇಸ್ಮಾಯಿಲ್ ಸುಲ್ತಾನ್, ಯೂಸುಫ್ ರೆಂಜಲಾಡಿ, ಅಝೀಝ್ ಬಡಕ್ಕೋಡಿ, ಸುಹೈಲ್ ಬಡಕ್ಕೋಡಿ, ಬಾತಿಷಾ ಬಾಳಾಯ, ಜಾಬಿರ್ ಸುಲ್ತಾನ್ ಬಾಳಾಯ, ನೌಫಲ್ ಅಜ್ಜಿಕ್ಕಲ್, ತ್ವಾಹಿರ್ ಕಲ್ಪಣೆ, ಶಾಕಿರ್ ಎಂ.ಎ, ಆರಿಫ್ ಕೂಡುರಸ್ತೆ, ಹನೀಫ್ ಕೂಡುರಸ್ತೆ ಪಾಲ್ಗೊಂಡಿದ್ದರು. ಯೂಸುಫ್ ರೆಂಜಲಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.