ಪುತ್ತೂರು: ಆನ್ಲೈನ್ ಶಿಕ್ಷಣದಿಂದ ಎಷ್ಟು ಉಪಯೋಗವೊ ಅಷ್ಟೇ ದುರುಪಯೋಗವು ಇದೆ. ಕೊರೊನದಿಂದಾಗಿ ಇಡೀ ಜಗತ್ತು ಈಗ ಆನ್ಲೈನ್ ಶಿಕ್ಷಣದಲ್ಲಿ ನಿಂತಿದೆ. ಅಲ್ಲದೆ ಮನೆಯ ಪ್ರತಿಯೊಂದು ವ್ಯವಹಾರಗಳು ಇದರಲ್ಲೆ ನಡೆಯುತ್ತದೆ. ಸಾಮಾಜಿಕ ಜಾಲತಾಣ ಎಂಬುದು ಜನರನ್ನು ಹೇಗೆ ಸೆಳೆದುಕೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಆದರೆ ನಾವು ಜಾಲತಾಣದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಮುಂದಾಗಬೇಕು. ಜಾಲತಾಣಗಳಲ್ಲೇ ಸಂಪೂರ್ಣವಾಗಿ ಕಳೆದುಹೋಗದಿರಿ ಎಂದು ಮುಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದ್ ಕುಡ್ಲ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಆಶ್ರಯದಲ್ಲಿ ನಡೆದ ಆನ್ ಲೈನ್ ಶಿಕ್ಷಣ ಮತ್ತು ಸಮಯ ನಿರ್ವಹಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಶ್ರೀನಾಥ್ ಸ್ವಾಗತಿಸಿ, ಸ್ವಯಂಸೇವಕಿ ಚರಿಷ್ಮಾ ವಂದಿಸಿದರು. ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.