ಪುತ್ತೂರು: ಕಡಮಜಲು ಕೃಷಿ ಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ವಿಟ್ಲದ ಕಲ್ಲಡ್ಕ ಮಾಣಿ ವಲಯದ ಪ್ರಗತಿಬಂಧು ಮತ್ತು ಸ್ವಸಾಹಯ ತಂಡದ 60 ಮಂದಿ ಫಲಾನುಭವಿ ರೈತರು ಸಮಗ್ರ ಕೃಷಿ ಅಧ್ಯಯನ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕೃಷಿಕ ICAR – DCAR – IMC ಸದಸ್ಯ ಕಡಮಜಲು ಸುಭಾಸ್ ರೈ ಯವರು ವಿಶೇಷವಾಗಿ ವೈಜ್ಞಾನಿಕ ಗೇರು ಕೃಷಿ ಮತ್ತು ಸಮಗ್ರ ಕೃಷಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಭಾಗವಹಿಸಿದ ರೈತ ಪ್ರತಿನಿಧಿಗಳು ಕೃಷಿ ಸಂವಾದದಲ್ಲಿ ಪಾಲು ಪಡೆದರು. ತಾಲೂಕು ಕೃಷಿ ಮೇಲ್ವಿಚಾರಕಿ ನಂದಿತಾ ಸ್ವಾಗತಿಸಿದರು. ಪುತ್ತೂರು ತಾಲೂಕು ಕೃಷಿ ಅಧಿಕಾರಿ ಉಮೇಶ್ ಬಿ. ರವರು ಪ್ರಾಸ್ತವಿಕ ಮಾತಾನಾಡಿ ಕೃಷಿ ದರ್ಶನ ಮಾಡಿದರು. ವೇದಿಕೆಯಲ್ಲಿ ಸೇವಾ ಪ್ರತಿನಿಧಿಗಳಾದ ಸುಚಿತ್ರಾ, ಭಾರತಿ, ಯಶೋಧ, ಯೋಧ ಪ್ರಕಾಶ್, ಒಕ್ಕೂಟದ ಅಧ್ಯಕ್ಷರಾದ ಲೀಲಾವತಿ, ರಮೆಶ್ ಆಚಾರ್ಯ, ಜಯ ಸಿ.ಎಚ್, ಲೋಕಯ್ಯ ಪೂಜಾರಿ, ಕೋಶಾಧಿಕಾರಿ ಜಾರಪ್ಪ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಜಲಜಾಕ್ಷಿ ವಂದಿಸಿದರು. ಪ್ರೀತಿ ಎಸ್.ರೈ ಉಪಚರಿಸಿದರು
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.