HomePage_Banner
HomePage_Banner
HomePage_Banner
HomePage_Banner

ರೋಟರಿ ಸೆಂಟ್ರಲ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಮಾಜದ ಒಳಿತಿಗಾಗಿ ಮಾಡುವ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತದೆ-ರಂಗನಾಥ್ ಭಟ್

 

ಪುತ್ತೂರು: ದೇವರು ನಮಗೆ ಒಂದು ಸುಂದರ ಬದುಕನ್ನು ಕಲ್ಪಿಸಿಕೊಟ್ಟಿದ್ದಾನೆ. ನಾವು ಬದುಕಿರುವಷ್ಟು ದಿನ ಸಮಾಜದ ಒಳಿತಿಗಾಗಿ ಮಾಡುವಂತಹ ಕಾರ್ಯಗಳು ನಿಜಕ್ಕೂ ಶಾಶ್ವತವಾಗಿ ಉಳಿಯಬಲ್ಲುದು ಎಂದು ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ರೋಟರಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್‌ರವರು ಹೇಳಿದರು.

ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಜ.೧೨ ರಂದು ಬಪ್ಪಳಿಗೆ-ಬೈಪಾಸ್ ಆಶ್ಮಿ ಕಂಫರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ಪ್ರಸ್ತುತ ವರ್ಷದ ಧ್ಯೇಯವಾಕ್ಯವೆನಿಸಿದ ರೋಟರಿ ಅವಕಾಶಗಳನ್ನು ತೆರೆಯಿಸಿಕೊಡುತ್ತದೆ ಎಂಬುದರ ಪೂರಕವಾಗಿ ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಹಡೀಲು ಬಿದ್ದಂತಹ ಗದ್ದೆಯನ್ನು ಭತ್ತದ ನಾಟಿಗೊಳಿಸಿರುವುದು, ಪ್ರಜ್ಞಾ ಕೇಂದ್ರಕ್ಕೆ ತೆರಳಿ ಅಲ್ಲಿನ ವಿಶೇಷಚೇತನ ಮಕ್ಕಳಿಗೆ ನೆರವು ನೀಡಿರುವುದಾಗಿದೆ. ಒಳ್ಳೆಯ ಸಲಹೆ ನೀಡುವವರು ನಮ್ಮ ನಡುವೆ ಇದ್ದಾಗ ಸಂಸ್ಥೆಯು ಉತ್ತಮವಾಗಿ ಬೆಳೆಯಬಲ್ಲುದು ಜೊತೆಗೆ ಮತ್ತೊಬ್ಬರ ಕಷ್ಟವನ್ನು ಅರಿತು ಅವರ ಕಷ್ಟಗಳಿಗೆ ಸ್ಪಂದನೆ ನೀಡುತ್ತಿರುವವರೇ ನಿಜವಾದ ರೊಟೇರಿಯನ್ಸ್‌ಗಳಾಗಿದ್ದಾರೆ ಎಂದರು.
ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ ಡಿ.ರವರು ಕ್ಲಬ್‌ನ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಹಡೀಲು ಬಿದ್ದ ಗದ್ದೆಯನ್ನು ಭತ್ತದ ಕೃಷಿಯನ್ನು ರೋಟರಿ ಸೆಂಟ್ರಲ್‌ನ ಸದಸ್ಯರು ಒಗ್ಗೂಡಿ ಮಾಢಿರುವುದು ಇತರರಿಗೆ ಮಾದರಿಯಾಗಿದೆ ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಢುವ ಮೂಲಕ ವೈಬ್ರೆಂಟ್ ಕ್ಲಬ್ ಎನಿಸಿಕೊಂಡಿದೆ. ಮುಂದಿನ ದಿನಗಳಲ್ಲೂ ಕ್ಲಬ್‌ನಿಂದ ಅನೇಕ ಸಮಾಜಮುಖಿ ಕಾರ್ಯಗಳು ಹೊರಹೊಮ್ಮಲಿ ಎಂದರು.
ವಲಯ ಸೇನಾನಿ ಮನೋಹರ್ ಕುಮಾರ್‌ರವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕ್ಲಬ್‌ಗಳ ಸ್ಥಿತಿಗತಿ ಹೇಗಿತ್ತು ಎಂಬುದನ್ನು ನಾನು ಕಂಡಿದ್ದೇನೆ. ಈ ರೋಟರಿ ಸೆಂಟ್ರಲ್‌ನ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಾಟ್ಸಾಫ್ ಮುಖೇನ ಮೀಟಿಂಗ್‌ಗಳನ್ನು ನಡೆಸಿ ಕ್ಲಬ್ ಅನ್ನು ಜೀವಂತವಿರಿಸಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ಸಾಮಾಜಿಕ ಕಳಕಳಿ ಮುಂದುವರೆಯಲಿ ಎಂದರು.

ಸದಸ್ಯರ ಸೇರ್ಪಡೆ:
ಕ್ಲಬ್‌ಗೆ ನೂತನ ಸದಸ್ಯರಾಗಿ ವಿಟ್ಲ ಮೇಗಿನಪೇಟೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ಅಕ್ಷರ್ ಕಲ್ಲೇಗ, ಬೊಳ್ವಾರಿನ ನವಾಜ್ ಕಾಂಪ್ಲೆಕ್ಸ್‌ನಲ್ಲಿ ಸ್ಕ್ರೀನ್ ಪ್ರಿಂಟಿಂಗ್ ವೃತ್ತಿ ನಿರ್ವಹಿಸುತ್ತಿರುವ ಗಣೇಶ್ ಆಚಾರ್ಯರವರನ್ನು ಸೇರ್ಪಡೆಗೊಳಿಸಲಾಗಿದ್ದು, ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ನೂತನ ಸದಸ್ಯರಿಗೆ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಸನತ್ ರೈಯವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.

ಶ್ಲಾಘನೆ:
ಪುತ್ತೂರು ಸರಕಾರಿ ಆಸ್ಪತ್ರೆಯ ರೆಡ್‌ಕ್ರಾಸ್ ಜನೌಷಧಿ ಕೇಂದ್ರಕ್ಕೆ ರೂ.೩೭ ಸಾವಿರ ವೆಚ್ಚದ ಆಕ್ಸಿಜನರೇಟರ್ ಕೊಡುಗೆ ನೀಡಿದ ಕ್ಲಬ್ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ, ಪ್ರಜ್ಞಾ ವಿಶೇಷಚೇತನ ಕೇಂದ್ರಕ್ಕೆ ಸದಸ್ಯರ ಕೊಡುಗೆಯಾಗಿ ರೂ.೧೦ ಸಾವಿರ ಹಾಗೂ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ರೂ.೫ ಸಾವಿರ ಕೊಡುಗೆಯನ್ನು ಅಣ್ಣಪ್ಪ ದಂಪತಿಗೆ ಹಸ್ತಾಂತರ, ಮಿನಿ ವಿಧಾನಸೌಧದ ಆವರಣದಲ್ಲಿ ಬೆಳಿಗ್ಗೆ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ಅಂಗವಾಗಿ ಜರಗಿದ ಉಚಿತ ಮಧುಮೇಹ, ಲಿಪಿಡ್ ಪ್ರೊಫೈಲ್, ಊಃಂ೧ಛಿ, ರಕ್ತದೊತ್ತಡ, ಬಿಎಂಡಿ, ಬಿಎಂಐ ತಪಾಸಣಾ ಶಿಬಿರದಲ್ಲಿ ಸಿಬ್ಬಂದಿಗಳೊಂದಿಗೆ ಸಹಕರಿಸಿದ ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿಯ ಮಾಲಕರಾದ ನೋಯಲ್ ಡಿ’ಸೋಜ, ಸಮುದಾಯ ಸೇವೆಗೆ ರೂ.೧೦ ಸಾವಿರ ಕೊಡುಗೆ ನೀಡಿದ ರೋಟರಿ ಭೀಷ್ಮ ಕೆ.ಆರ್ ಶೆಣೈ, ಕಲ್ಲಪಳ್ಳಿ ಎಂಬಲ್ಲಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ೨೦ ಜನರಿಗೆ ಊಟದ ವ್ಯವಸ್ಥೆ ಮಾಡಿದ ಕ್ಲಬ್ ಸದಸ್ಯ ಯತೀಶ್‌ರವರ ಸೇವೆಯನ್ನು ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಫೀಕ್ ರೋಯಲ್‌ರವರು ಶ್ಲಾಘಿಸಿದರು.

ಗುರುತಿಸುವಿಕೆ:
ಕ್ಲಬ್‌ನ ಪ್ರತಿಯೊಂದು ಚಟುವಟಿಕೆಗಳಿಗೆ ಸಾಥ್ ನೀಡುವ ಆಶ್ಮಿ ಕಂಫರ್ಟ್‌ನ ಸಿಬ್ಬಂದಿ ಲಿಖಿತ್, ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರ ಭಾವಚಿತ್ರಕ್ಕೆ ಡಿಜಿಟಲ್ ಇಮೇಜ್ ಟಚ್ ನೀಡಿದ ಕಾರ್ಯದರ್ಶಿ ಅಶೋಕ್ ನಾಕ್‌ರವರ ಪುತ್ರ ಜಿತೇಶ್ ಕೆದಿಲ, ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡುವ ಸಂದರ್ಭದಲ್ಲಿ ಊಟೋಪಚಾರ ನೀಡಿ ಸಹಕರಿಸಿದ ಗಣೇಶ್ ಆಚಾರ್ಯ ದಂಪತಿ, ಜಿಲ್ಲಾ ಗವರ್ನರ್ ಭೇಟಿ ಸಂದರ್ಭದ ವಿಡಿಯೋ ಎಡಿಟಿಂಗ್‌ನಲ್ಲಿ ಸಹಕರಿಸಿದ ಅನುಷ್ ಇಲ್ಯಾಹ್ ಹಾಗೂ ಹಫೀಝ್ ರೆಹಮಾನ್, ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಕ್‌ರವರನ್ನು ಹಾಗೂ ಭೋಜನ ಕೂಟಕ್ಕೆ ದೇಣಿಗೆ ನೀಡಿ ಸಹಕರಿಸಿದ ಸದಸ್ಯರನ್ನು ಗುರುತಿಸಿ, ಅವರಿಗೆ ಹೂ ನೀಡಿ ಅಭಿನಂದಿಸಲಾಯಿತು.

ವಿಖ್ಯಾತಿ ಬೆಜ್ಜಂಗಳ ಹಾಗೂ ಶ್ರೇಯ ವೆಂಕಟ್ರಾಜ್ ಪ್ರಾರ್ಥಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರ ಪತ್ನಿ ರಜಿನಿ ರಂಗನಾಥ್, ನಿಯೋಜಿತ ಅಧ್ಯಕ್ಷ ನವೀನ್‌ಚಂದ್ರ ನಾಕ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ್ ನಾಕ್ ವರದಿ ಮಂಡಿಸಿ, ವಂದಿಸಿದರು. ಜಿಲ್ಲಾ ಗವರ್ನರ್‌ರವರ ಪರಿಚಯವನ್ನು ಸದಸ್ಯ ಚಂದ್ರಶೇಖರ್ ರೈ ಹಾಗೂ ವೊಕೇಶನಲ್ ಸರ್ವಿಸ್ ನಿರ್ದೇಶಕ ಶಿವರಾಂರವರು ಸನ್ಮಾನಿತರ ಪರಿಚಯ ಮಾಡಿದರು.  ಡಾ|ರಾಜೇಶ್ ಬೆಜ್ಜಂಗಳ ಹಾಗೂ ಭಾರತಿ ಎಸ್.ರೈಯವರು ಕಾರ್ಯಕ್ರಮ ನಿರೂಪಿಸಿದರು.

ಧತ್ತಿನಿಧಿ ಸ್ಥಾಪನೆ..
ಕ್ಲಬ್ ಸದಸ್ಯರಾಗಿದ್ದು, ಇತ್ತೀಚೆಗೆ ಅಗಲಿದ ಬಂಟ್ವಾಳ ಉಪತಹಶೀಲ್ದಾರ್ ಶ್ರೀಧರ್ ಕೆ.ರವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಧತ್ತಿನಿಧಿ ಸ್ಥಾಪಿಸಲಾಗಿದ್ದು, ಈ ಧತ್ತಿನಿಧಿಯನ್ನು ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ಅನಾವರಣಗೊಳಿಸಿದರು. ಈ ಧತ್ತಿನಿಧಿಗೆ ಈಗಾಗಲೇ ರೂ.೨೫ ಸಾವಿರ ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ರೂ.೧ ಲಕ್ಷ ಮೊತ್ತವನ್ನು ಸಂಗ್ರಹಿಸಿ ಅದನ್ನು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಬಡಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಉದ್ಧೇಶವನ್ನು ಹೊಂದಲಾಗಿದೆ. ಈ ಧತ್ತಿನಿಧಿಗೆ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ರೂ.೫ ಸಾವಿರ ಹಣವನ್ನು ನೀಡಿ ಸಹಕರಿಸಿದ್ದಾರೆ ಎಂದು ಯೂತ್ ಸರ್ವಿಸ್ ನಿರ್ದೇಶಕಿ ಭಾರತಿ ಎಸ್.ರೈಯವರು ಹೇಳಿದರು.

ರಿಕ್ಷಾ ಚಾಲಕಿಗೆ ಸನ್ಮಾನ..
ಕಡಬ ಹಾಗೂ ಪುತ್ತೂರು ತಾಲೂಕಿನಲ್ಲಿ ಏಕಮಾತ್ರ ಮಹಿಳಾ ರಿಕ್ಷಾ ಚಾಲಕಿಯಾಗಿರುವ ಕುಂತೂರು ನಿವಾಸಿ ಶಿವಪ್ಪ ಗೌಡರವರ ಪತ್ನಿ ಪದ್ಮಾವತಿಯವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಾವತಿಯವರು, ಬೈಕ್, ಕಾರು ಹಾಗೂ ರಿಕ್ಷಾ ಚಾಲನೆಯನ್ನು ತಾನು ತಿಳಿದಿದ್ದು, ಇದಕ್ಕೆ ನನ್ನ ಪುತ್ರನೇ ಸ್ಫೂರ್ತಿಯಾಗಿದ್ದಾನೆ. ಪ್ರತೀ ಬೆಳಿಗ್ಗೆ ೬.೩೦ ಗಂಟೆಗೆ ಪುತ್ತೂರಿಗೆ ಆಗಮಿಸಿ ಸಂಜೆ ಮನೆಗೆ ತೆರಳುವ ಮುನ್ನ ರೂ.೧೫೦೦ ದುಡಿಯುವ ಮೂಲಕ ಛಲವಿದ್ದರೆ ದುಡಿಯಬಲ್ಲೆ ಎಂದು ಸಾಧಿಸಿ ತೋರಿಸಿದ್ದೇನೆ. ನನ್ನ ಸಾಧನೆಯ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಮಾದರಿಯಾಗಿದೆ. ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಕ್ಲಬ್‌ಗೆ ಕೃತಜ್ಞತೆ ಸಲ್ಲಿಸಿದರು.

ನಿಮ್ಮ ಭೂಮಿ ನಮ್ಮ ಕೃಷಿ ಯೋಜನೆಯಡಿಯಲ್ಲಿ
ಹಡೀಲು ಬಿದ್ದಿದ್ದ ೨ ಗದ್ದೆಯಲ್ಲಿ ಭತ್ತದ ನಾಟಿ ಕೃಷಿ…
೨೫ ವರ್ಷಗಳಿಂದ ಹಡೀಲು ಬಿದ್ದಿದ್ದ ಕಂಬಳದ್ದಡ್ಡ ಎಂಬಲ್ಲಿನ ಗದ್ದೆಯನ್ನು `ನಿಮ್ಮ ಭೂಮಿ ನಮ್ಮ ಕೃಷಿ’ ಯೋಜನೆಯಡಿಯಲ್ಲಿ ಕ್ಲಬ್‌ನ ಸದಸ್ಯರೆಲ್ಲರೂ ಗದ್ದೆಯನ್ನು ಹದಗೊಳಿಸಿ, ನೇಜಿ ನೆಡುವ ಕಾಯಕವನ್ನು ಮಾಡಲಾಗಿದ್ದು ಮಾತ್ರವಲ್ಲದೆ ಹತ್ತಿರಲ್ಲಿಯೇ ಇರುವ ೩೦ ವರ್ಷದಿಂದ ಹಡೀಲು ಬಿದ್ದಿದ್ದ ಮತ್ತೊಂದು ಗದ್ದೆಯನ್ನೂ ಹದಗೊಳಿಸಿ ಭತ್ತದ ಕೃಷಿಯನ್ನು ಮಾಡಲಾಯಿತು. ಕೃಷಿಯ ಅನುಭವವೇ ಇಲ್ಲದವರೂ ಕೂಡ ಭತ್ತದ ಕೃಷಿಯನ್ನು ಹೇಗೆ ಮಾಡುವುದೆಂದು ಗದ್ದೆಯಲ್ಲಿ ಮಿಂದೆದ್ದು ತಿಳಿದುಕೊಂಡರು. ತಾವು ಮಾಡಿದಂತಹ ಭತ್ತದ ಕೃಷಿಯನ್ನೇ ಬಳಸಿ ಹೊಸ ಅಕ್ಕಿಯ ಊಟದ ರುಚಿಯನ್ನು ಸವಿದು ಧನ್ಯರಾಗಿದ್ದಾರೆ ಕ್ಲಬ್‌ನ ಸದಸ್ಯರು ಆಗಿದ್ದಾರೆ ಎಂದು ಹಡೀಲು ಬಿದ್ದಿದ್ದ ಗದ್ದೆಯನ್ನು ಹಸನುಗೊಳಿಸಿದ ಸಂಪೂರ್ಣ ಚಿತ್ರಣವನ್ನು ಪವರ್‌ಪಾಂಟ್ ಮುಖೇನ ಕ್ಲಬ್ ಸದಸ್ಯ ಡಾ|ರಾಜೇಶ್ ಬೆಜ್ಜಂಗಳರವರು ಪ್ರಸ್ತುತಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.