ಪುತ್ತೂರು: ಮರೀಲ್ ಚರ್ಚ್ ವ್ಯಾಪ್ತಿಯ ಜಿಡೆಕಲ್ಲು-ಗಡಿಕಲ್ಲು ನಿವಾಸಿ ನಿವೃತ್ತ ರೈಲ್ವೆ ಉದ್ಯೋಗಿ ಕ್ಲಿಫರ್ಡ್ ಮೈಕಲ್ ಗೋಮ್ಸ್(69ವ.)ರವರು ಹೃದಯಾಘಾತದಿಂದ ಜ.12ರಂದು ನಿಧನ ಹೊಂದಿದ್ದಾರೆ. ಸಿ.ಎಂ ಗೋಮ್ಸ್ರವರು ದಕ್ಷಿಣ ಮಧ್ಯ ರೈಲ್ವೆ ಹಾಗೂ ಕೊಂಕಣ್ ರೈಲ್ವೆಯಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಸಿಸಿಲಿಯಾ ಗೋಮ್ಸ್, ಪುತ್ರರಾದ ಗುಲ್ಬರ್ಗ ಕ್ರೈಸ್ತ ಧರ್ಮಪ್ರಾಂತ್ಯದಲ್ಲಿ ಧರ್ಮಗುರು ಸೇವೆ ಸಲ್ಲಿಸುತ್ತಿರುವ ವಂ|ಕ್ಲೆವನ್ ಗೋಮ್ಸ್, ಎಲ್ ಆಂಡ್ ಟಿ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲಿಂಟನ್ ಗೋಮ್ಸ್ರವರನ್ನು ಅಗಲಿದ್ದಾರೆ.