HomePage_Banner
HomePage_Banner
HomePage_Banner
HomePage_Banner

ಅರಿಯಡ್ಕ: ಬಿಜೆಪಿಯಿಂದ ಕಾರ್‍ಯಕರ್ತರಿಗೆ, ಮತದಾರರಿಗೆ ಅಭಿನಂದನೆ | ಧರ್ಮಾಧಾರಿತ ರಾಜಕೀಯದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು-ರಾಧಾಕೃಷ್ಣ ಬೋರ್ಕರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಧರ್ಮಾಧಾರಿತ ರಾಜಕೀಯದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುವುದನ್ನು ಕಾರ್ಯಕರ್ತರು ಸಾಧಿಸಿ ತೋರಿಸುವುದೇ ಈ ಪಂಚಾಯತಿ ಚುನಾವಣೆಯ ವಿಶೇಷ, ಯಾರು ಏನೇ ಹೇಳಿದರೂ ಈ ಬಾರಿ ಗೆಲುವು ನಮ್ಮದಾಗಿದೆ ಎಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. ಜ.೧೦ರಂದು ಅರಿಯಡ್ಕ ಮಡದಯಂಗಲ ಕರ್ಕೇರಾ ತರವಾಡು ವಠಾರದಲ್ಲಿ ನಡೆದ ಮೂರನೇ ವಾರ್ಡಿನ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮಾತನಾಡಿ ಕಾರ್ಯಕರ್ತರು ಪ್ರತೀ ಮನೆಮನೆಗಳಿಗೆ ತೆರಳಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಫಲದಿಂದಾಗಿ ನಮಗೆ ಗೆಲುವು ಸಾಧ್ಯವಾಗಿದೆ ಎಂದರು.
ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ ಮಾತನಾಡಿ ನಮ್ಮನ್ನು ಸೋಲಿಸಲು ವಿವಿಧ ಪ್ರಯತ್ನಗಳು ನಡೆಯಿತಾದರೂ ಗೆಲುವು ನಮ್ಮದೇ ಆಗಿದೆ, ಕಾರ್ಯಕರ್ತರ, ನಾಯಕರ ಪರಿಶ್ರಮ ಗೆಲುವಿಗೆ ಕಾರಣವಾಗಿದೆ ಎಂದರು.
ಅರಿಯಡ್ಕ ಮಾಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ ಚಾಕೋಟೆ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ, ಚುನಾಯಿತರಾದ ಎಲ್ಲ ಸದಸ್ಯರು ನಾಡಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಪ್ರಸ್ತಾವನೆಗೈದ ಗ್ರಾ.ಪಂ ಸದಸ್ಯ ಹರೀಶ್ ರೈ ಜಾರತಾರು ಮಾತನಾಡಿ ನಮ್ಮ ಗೆಲುವಿಗೆ ಕಾರ್ಯಕರ್ತರೇ ಕಾರಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ರೈ ಪಾಪೆಮಜಲು ಮಾತನಾಡಿ ಕಾರ್ಯಕರ್ತರ ಶ್ರಮದಿಂದ ಗೆಲುವು ಸಿಕ್ಕಿದೆ, ಪಕ್ಷ ಇನ್ನಷ್ಟು ಗಟ್ಟಿಯಾಗಿದೆ, ಕಾಂಗ್ರೆಸ್ ಮುಕ್ತ ಗ್ರಾಮವಾಗಿದೆ ಎಂದರು.

ಕರ್ಕೇರ ತರವಾಡಿನ ಹಿರಿಯರಾದ ದುರ್ಗೇಂದ್ರ ಮಡ್ಯಂಗಳರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿಂದು ಜಾಗರಣ ವೇದಿಕೆಯ ತಾಲೂಕ ಅಧ್ಯಕ್ಷ ಅಶೋಕ್ ತ್ಯಾಗರಾಜೆ, ಬೂತ್ ಸಮಿತಿ ಕಾರ್ಯದರ್ಶಿ ಗಣೇಶ್ ಶೇಕಮಲೆ ವೇದಿಕೆಯಲ್ಲಿದ್ದರು. ಗಣ್ಯರನ್ನು ಮತ್ತು ನೂತನ ಪಂಚಾಯತ್ ಸದಸ್ಯರನ್ನು ಕಾರ್ಯಕರ್ತರಾದ ಸುರೇಶ್ ಶೇಕಮಲೆ, ಗೋವಿಂದ ಮಣಿಯಾಣಿ, ನಾರಾಯಣ ಗೌಡ, ಪ್ರವೀಣ ಮಡ್ಯಂಗಲ, ಉಮೇಶ ಶೇಕಮಲೆ, ಸುದರ್ಶನ್ ರೈ, ದಿನೇಶ್ ಜಾರತ್ತಾರು, ಬಾಬು ಶೇಕಮಲೆ, ಪ್ರವೀಣ ಪನೆಕ್ಕಳ, ಗೌತಮ್ ಮಂಡ್ಯಂಗಳ, ರವೀಶ್ ಜಾರತ್ತಾರು, ಸಂದೀಪ್ ಜಾರತ್ತಾರು, ಜಯರಾಜ್ ಸುರುಳಿಮೂಲೆ, ನಿತಿನ್ ರೈ ಮಡ್ಯಂಗಳ, ಕಿರಣ್ ಗೌಡ, ಶರತ್ ಕುಮಾರ್ ಮಡ್ಯಂಗಳ, ಉಷಾ ಪ್ರವೀಣ್ ಮಡ್ಯಂಗಳ, ಸುಂದರ ಶೇಕಮಲೆ, ರಾಧಾಕೃಷ್ಣ, ಗುರುವಪ್ಪ ಶೇಕಮಲೆ ಶಾಲು ಹಾಕಿ ಗೌರವಿಸಿದರು. ಬೂತ್ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪನೆಕ್ಕಳ ಸ್ವಾಗತಿಸಿದರು. ಗ್ರಾ.ಪಂ ಮಾಜಿ ಸದಸ್ಯೆ ಪ್ರೇಮಲತಾ ರೈ ಮಡ್ಯಂಗಳ ವಂದಿಸಿದರು. ತಾಲೂಕು ಪ್ರ.ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.