ಪುತ್ತೂರು: ಮುಂಡೂರು ಗ್ರಾ.ಪಂ 1 ವಾರ್ಡಿನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅನುದಾನದಲ್ಲಿ ನರಿಮೊಗರು ಕಾಳಿಂಗಹಿತ್ಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲನಿಗೆ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಹಾಗೂ ಕುರೆಮಜಲ್ ಪುಲಿಂಕೆತ್ತಡಿ ರಸ್ತೆ ಅಭಿವೃದ್ದಿಯ ಗುದ್ದಲಿ ನೆರೆವೇರಿಸಲಾಯಿತು.
ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗುತ್ತಗೆದಾರರಾದ ಉದಯ ಕುಮಾರ್, ಹಾಗೂ ಜಯರಾಮ ಪೂಜಾರಿ ನರಿಮೊಗರು, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣರ್ನೂಜಿ, ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲ್, ಅರಣಾ ಅನಿಲ್ ಕುಮಾರ್ ಕಣ್ಣರ್ನೂಜಿ, ಪುಷ್ಪಾವತಿ ಪುರಂದರ ನಡುಬೈಲು, ಪುರಂದರ ಗೌಡ, ಧನಂಜಯ ಕಲ್ಲಮ, ಮನೋಹರ, ಬೂತ್ ಕಾರ್ಯದರ್ಶಿ ಜನಾರ್ಧನ ಪೂಜಾರಿ ಕುರೆಮಜಲ್ ಹಾಗೂ ಊರವರು ಉಪಸ್ಥಿತರಿದ್ದರು.