- ಪ್ರಸ್ತುತ ನಡೆದಾಡುವ ಆದರ್ಶ ವ್ಯಕ್ತಿಗಳ ಕೊರತೆ ಇದೆ: ಬಾಲಕೃಷ್ಣ ಪೊರ್ದಾಲ್
ಬೆಟ್ಟಂಪಾಡಿ: ಪ್ರಸ್ತುತ ಕಾಲದಲ್ಲಿ ನಡೆದಾಡುವ ಆದರ್ಶ ವ್ಯಕ್ತಿಗಳ ಕೊರತೆ ಕಾಡುತ್ತಿದ್ದು, ವಿವೇಕಾನಂದರ ಜೀವನ ಶೈಲಿಯನ್ನು ಅಳವಡಿಸಿಕೊಂಡು ಈ ಕೊರತೆಯನ್ನು ನಿವಾರಿಸಬೇಕು ಎಂದು ಪುತ್ತೂರು ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿದ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ರಂಗನಾಥ ರೈ ಗುತ್ತು ಮಾತನಾಡುತ್ತಾ ಯುವಜನತೆಯಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ‘ವಿವೇಕಾನಂದ ಏಕಮಾತ್ರ ಮಾದರಿ ವ್ಯಕ್ತಿತ್ವ ಅವರ ಹೋಲಿಕೆಯ ಇನ್ನೊಂದು ವ್ಯಕ್ತಿತ್ವ ಸಿಗುವುದು ಅಸಾಧ್ಯ’ ಎಂದು ಹೇಳಿದರು. ಕಾರ್ಯಕ್ರಮವನ್ನು ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಹರಿಪ್ರಸಾದ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಎನ್ಎಸ್ಎಸ್ ಕಾರ್ಯಕ್ರಮಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ನೆಲೆಯಲ್ಲಿ ರೂಪಿತಗೊಂಡಿದ್ದು, ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಶಿಕುಮಾರ, ದಾಮೋದರ ಗೌಡ ಕೆ, ರಾಮ ಕೆ, ಡಾ. ಪ್ರಸಾದ್ ಕೆ, ಉದಯರಾಜ್ ಎಸ್, ದೀಕ್ಷಿತ್ ಕುಮಾರ್, ಡಾ. ಪೊಡಿಯ ಉಪಸ್ಥಿತರಿದ್ದರು. ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಎನ್ಎಸ್ಎಸ್ ಘಟಕ ನಾಯಕಿ ರಂಜಿತಾ ಜಿ ವಂದಿಸಿದರು. ಸ್ವಯಂಸೇವಕಿ ಅನುಪಮ ಕೆ ಕಾರ್ಯಕ್ರಮ ನಿರ್ವಹಿಸಿದರು.