HomePage_Banner
HomePage_Banner
HomePage_Banner
HomePage_Banner

ಕುಂಬ್ರದಲ್ಲಿ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ `ಮಂದಾರ’ ಪ್ರಶಸ್ತಿ ಪ್ರದಾನ ಆಮಂತ್ರಣ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿಶ್ವಯುವಕ ಮಂಡಲ ಕುಂಬ್ರ ಇವರ ಆಶ್ರಯದಲ್ಲಿ ಮಂದಾರ ಬಳಗ ಕುಂಬ್ರ ಅರ್ಪಿಸುವ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಕೊಡಮಾಡುವ ` ಮಂದಾರ’ ಪ್ರಶಸ್ತಿ ಪ್ರದಾನ ಸಮಾರಂಭ ಜ.೨೪ ರಂದು ಕುಂಬ್ರದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.೧೨ ರಂದು ಕುಂಬ್ರ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಮಂದಾರ ಬಳಗದ ನಟ, ನಿರ್ದೇಶಕ ಸುಂದರ್ ರೈ ಮಂದಾರ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಕಾರ್ಯದರ್ಶಿ ರತನ್ ರೈ ಕುಂಬ್ರ, ಕೋಶಾಧಿಕಾರಿ ಅಶೋಕ್ ಬಡಕ್ಕೋಡಿ, ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ವಿಶ್ವಯುವಕ ಮಂಡಲದ ಅಧ್ಯಕ್ಷ ಅಂಕಿತ್ ಕುಯ್ಯಾರು, ಭಜನಾ ಮಂದಿರದ ಸದಸ್ಯ ಚಂದ್ರಕಾಂತ ಶಾಂತಿವನ, ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ, ಜನನಿ ಕನ್ಸ್‌ಸ್ಟ್ರಕ್ಷನ್‌ನ ಗುತ್ತಿಗೆದಾರ ಯುವರಾಜ್ ಶೆಟ್ಟಿ, ಉದ್ಯಮಿ ಅಜಿತ್ ಕುಮಾರ್ ಶೆಟ್ಟಿ, ರಾಜ್‌ಮೋಹನ್ ನೀರಾಲ, ಕರುಣಾಕರ ರೈ ಬಿಜಳ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.