ನೆಲ್ಯಾಡಿ: ಸುಳ್ಯ ಶಾಸಕ ಎಸ್.ಅಂಗಾರರವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಗೋಳಿತ್ತೊಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಅಂಗಾರ, ಬಿಜೆಪಿ ಪಕ್ಷಕ್ಕೆ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ಜನಾರ್ದನ ಪಟೇರಿ, ಬಾಲಕೃಷ್ಣ ಅಲೆಕ್ಕಿ, ಬಾಬು ಪೂಜಾರಿ ಕಿನ್ಯಡ್ಕ, ಜೀವಿತಾ ಚಂದ್ರಶೇಖರ ಪೆರಣ, ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಸುಲ್ತಾಜೆ, ಮಾಜಿ ಸದಸ್ಯ ನೋಣಯ್ಯ ಗೌಡ ಅನಿಲ, ಕಾರ್ಯಕರ್ತರಾದ ಚಂದ್ರಶೇಖರ ಪೆರಣ, ಸಂದೇಶ್ ಏಡ್ಮೆ, ಕೀರ್ತನ್ ಸುಲ್ತಾಜೆ, ಅನಿತಾಪ್ರಕಾಶ್ ಪಾಲೇರಿ, ಸುಪ್ರಿತ್ ಪುಲಾರ, ಶ್ಯಾಮ್ಪ್ರಸಾದ್ ಗೋಳಿತ್ತೊಟ್ಟು, ಭಾಸ್ಕರ ಗೋಳಿತ್ತೊಟ್ಟು, ಸದಾಶಿವ ಪುರ ಮತ್ತಿತರರು ಪಾಲ್ಗೊಂಡಿದ್ದರು.