ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಜ.12ರಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಗಣರಾಜ ಕುಂಬ್ಳೆಯವರು ಮಾತನಾಡಿ, ಸ್ವಾಮಿ ವಿವೇಕಾನಂದರು ಒಬ್ಬ ಬಿರುಗಾಳಿ ಸಂತ. ಅವರ ವ್ಯಕ್ತಿತ್ವವು ಕ್ರಾಂತಿಕಾರಿ, ಸಕಾರಾತ್ಮಕ ಬದಲಾವಣೆಯನ್ನು ತರಲು ಉದ್ದೇಶಿಸಿದ್ದವು. ಇಂದಿಗೂ ಅವರ ಹೆಸರನ್ನು ನೆನಪಿನಲ್ಲಿಡುತ್ತಿದ್ದೇವೆ ಅಂದರೆ ಅದು ಅವರು ಮಾಡಿದ ಮಹತ್ತರವಾದ ಕೆಲಸದಿಂದ ಹೀಗೆ ಅವರು ತೋರಿಸಿದ ದಾರಿಯಲ್ಲಿ ಮುಂದೆ ಸಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ಭಟ್ರವರು ಮಾತನಾಡಿ, ಸ್ವಾಮಿ ವಿವೇಕಾನಂದರು ನಮಗೆಲ್ಲರಿಗೂ ಆದರ್ಶಪ್ರಾಯರು. ಅವರ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ ತಮ್ಮ ಗುರಿಯನ್ನು ಸಾಧಿಸಲು ಮಾರ್ಗದರ್ಶನವನ್ನು ಮಾಡುತ್ತದೆ. ಅವರ ಜನ್ಮದಿನದಂದು ನಾವು ಅವರು ಹೇಳಿದಂತೆ ಕಾರ್ಯಪ್ರವೃತರಾಗುವ ಸಂಕಲ್ಪ ಮಾಡೋಣ ಎಂದು ಹೇಳಿದರು. ಉಪನ್ಯಾಸಕ ಚೇತನ್ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಪ್ರಸಾದ್ ಸಹಕರಿಸಿದರು.