ಕುಂಬ್ರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ದ ಕುಂಬ್ರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಲೋಕೇಶ್ ಚಾಕೋಟೆ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ದಿಸಿದ್ಧ ತಿರುಮಲೇಶ ಗೌಡ ದೊಡ್ಡಮನೆ, ರೇಖಾರಾಘವ ಗೌಡ,ಇವರನ್ನು ಸಂಘದ ಶಾಖಾ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದಿಸಲಾಯಿತು.
ಕುಂಬ್ರ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಇದ್ಯಾಪೆ ಶಾಲು ಹೊದಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು, ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಗೌಡ ಸಾರೆಪ್ಪಡಿ, ರಾಮಕೃಷ್ಣ ಗೌಡ ಸಾಮೇತಡ್ಕ,ಶ್ರೀಧರ್ ಗೌಡ ಅಂಗಡಿಹಿತ್ಳು, ಉಮೇಶ್ ಗೌಡ ಕನ್ನಯ,ಶ್ರೀಧರ ಗೌಡ ಎರಕ್ಕಲ,ವಿಶ್ವನಾಥ ಗೌಡ ಬೋಳ್ಳಡಿ ವಿಜಯಭಾರತಿ ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ದ ಸಿಇಓ ಸುಧಾಕರ್ ಕೆ, ಕುಂಬ್ರ ಶಾಖಾ ಮೆನೇಜರ್ ದಿನೇಶ್ ಪೆಲತ್ಹಿಂಜ, ಸಿಬಂದಿಗಳಾದ ಕಾವ್ಯ ಎ, ಯಸ್,ದಿನೇಶ್ ಕುಮಾರ್,ಅನುರಾಜ್ ಉಪಸ್ಥಿತರಿದ್ದರು