HomePage_Banner
HomePage_Banner
HomePage_Banner
HomePage_Banner

ಕಾಣಿಯೂರು- ಪಕ್ಷ ವಿರೋಧಿ ಹಿನ್ನಲೆ- ಸೂಕ್ತ ಕ್ರಮಕ್ಕಾಗಿ ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಜಿಲ್ಲಾ ಸಮಿತಿಗೆ ವರದಿ ರವಾನೆ

ಕಾಣಿಯೂರು: ಚಾರ್ವಾಕ ಗ್ರಾಮದ ಗೋಪಾಲಕೃಷ್ಣ ಪಟೇಲ್, ಮಾಧವಿ ಕೋಡಂದೂರು ಮತ್ತು ದೋಳ್ಪಾಡಿ ಗ್ರಾಮದ ದಿನೇಶ್ ಇಡ್ಯಡ್ಕರವರು ಪಕ್ಷಕ್ಕೆ ವಿರುದ್ಧವಾಗಿ ಕೆಲಸಗಳನ್ನು ಮಾಡಿರುವುದಾಗಿ ಆರೋಪಿಸಿ ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಸೂಕ್ತ ಶಿಸ್ತುಕ್ರಮದ ಶಿಫಾರಸ್ಸಿಗಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಜಿಲ್ಲಾ ಬಿಜೆಪಿ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಜಿಲ್ಲಾ ಸಮಿತಿಯಿಂದ ಮುಂದಿನ ನಿರ್ಧಾರ ಬರುವವರೆಗೆ ಭಾರತೀಯ ಜನತಾ ಪಾರ್ಟಿಯ ಹೆಸರನ್ನು ಉಲ್ಲೇಖಿಸಿ ಪಾರ್ಟಿಯ ಚಟುವಟಿಕೆಗಳನ್ನು ಮಾಡುವಂತಿಲ್ಲ ಮತ್ತು ಭಾಗವಹಿಸುವಂತಿಲ್ಲ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ.

ದೂರಿನಲ್ಲಿ ಏನಿದೆ.. ಚಾರ್ವಾಕ ಗೋಪಾಲಕೃಷ್ಣ ಪಟೇಲ್, ಕಾಣಿಯೂರು ಗ್ರಾ.ಪಂ, ಮಾಜಿ ಅಧ್ಯಕ್ಷರುಗಳಾದ ಮಾಧವಿ ಕೋಡಂದೂರು ಹಾಗೂ ದಿನೇಶ್ ಇಡ್ಯಡ್ಕರವರು ಪಕ್ಷದ ಕಾರ್ಯಕರ್ತರಾಗಿದ್ದು, ಪಕ್ಷದ ಮೂಲಕ ವಿವಿಧ ಗೌರವದ ಹುದ್ದೆಗಳನ್ನು ಅಲಂಕರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯ ವಿರುದ್ದವಾಗಿ ಕೆಲಸಗಳನ್ನು ಮಾಡುತ್ತಾ, ಪಾರ್ಟಿಯ ಚಟುವಟಿಕೆಗೆ ತೀವ್ರತರವಾದ ತೊಂದರೆ ಮಾಡುವುದರ ಜೊತೆಗೆ, ವಿರೋಧ ಪಕ್ಷದವರಿಗೆ ಅನುಕೂಲವಾಗುವಂತೆ ಕೆಲಸಕಾರ್ಯಗಳನ್ನು ಮಾಡುತ್ತಿರುವ ಬಗ್ಗೆ ಸೂಕ್ತ ಶಿಶ್ತುಕ್ರಮ ಕೈಗೊಳ್ಳುವಂತೆ ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಘಟಕದಿಂದ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ನೀಡಿರುವ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.  ಶಿಫಾರಸ್ಸಿಗಾಗಿ ಜಿಲ್ಲಾ ಬಿಜೆಪಿ ಸಮಿತಿಗೆ ವರದಿ ಸಲ್ಲಿಸಲಾಗಿದೆ.

ಪಕ್ಷ ವಿರೋಧಿ ಬಗ್ಗೆ ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ಮೊದಲೇ ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಘಟಕದಿಂದ ಸುಳ್ಯ ಬಿಜೆಪಿ ಮಂಡಲ ಸಮಿತಿ ಮತ್ತು ಬಿಜೆಪಿ ಜಿಲ್ಲಾ ಸಮಿತಿಗೂ ದೂರುಗಳು ಬಂದಿದ್ದವು. ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದೆಂಬ ಸೂಚನೆಯನ್ನು ಜಿಲ್ಲಾ ಸಮಿತಿಯಿಂದ ಅವರಿಗೆ ನೀಡಲಾಗಿತ್ತು. ಆದರೆ ಗ್ರಾ.ಪಂ, ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿರುವುದರಿಂದ ಕಾಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಘಟಕದಿಂದ ಮತ್ತೊಮ್ಮೆ ದೂರುಗಳು ಬಂದಿತ್ತು. ಈ ಹಿನ್ನಲೆಯಲ್ಲಿ ಮುಂದಿನ ಕ್ರಮಕ್ಕಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿಯವರು ಚರ್ಚಿಸಿ ಜಿಲ್ಲಾ ಬಿಜೆಪಿ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಏನೇ ಇದ್ದರೂ ಜಿಲ್ಲಾ ಸಮಿತಿಯವರು ನಿರ್ಧಾರ ತೆಗೆದುಕೊಳುತ್ತಾರೆ. ಜಿಲ್ಲಾ ಸಮಿತಿಯಿಂದ ಯಾವುದೇ ನಿರ್ಧಾರ ಬರುವ ತನಕ ದೂರಿನಲ್ಲಿ ಉಲ್ಲೇಖಿಸಿರುವ ಈ ಮೂವರು ಬಿಜೆಪಿ ಪಕ್ಷದ ಹೆಸರನ್ನು ಉಲ್ಲೇಖಿಸಿ ಪಕ್ಷದ ಚಟುವಟಿಕೆಗಳನ್ನು ಮಾಡುವಂತಿಲ್ಲ ಮತ್ತು ಭಾಗವಹಿಸುವಂತಿಲ್ಲ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಪ್ರಕಟಿಸಿದೆ – ರಾಕೇಶ್ ರೈ ಕೆಡೆಂಜಿ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಡಲ ಸಮಿತಿ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.