ಪುತ್ತೂರು:ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಫ್ರೆಂಡ್ಸ್ ಇದರ ವತಿಯಿಂದ ೩ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮಗಳು ಜ.೧೭ರಂದು ಮಜ್ಜಾರುಗದ್ದೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ತಳಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ನಿವೃತ್ತ ಯೋಧರಿಗೆ, ದೈವನರ್ತಕರಿಗೆ ಹಾಗೂ ಹಿರಿಯ ರೈತರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಯಲಿದೆ ಎಂದು ಗೌರವ ಸಲಹೆಗಾರ ಕೋಚಣ್ಣ ಪೂಜಾರಿ ಎಂಡೆಸಾಗು ಹೇಳಿದರು.
ಜ.೧೪ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಯಿಲಕೊಚ್ಚಿ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಅಚ್ಚುತ ಮಣಿಯಾಣಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ವಿಷ್ಣು ಫ್ರೆಂಡ್ಸ್ನ ಅಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವಕಲಾನಿಕೇತನ ಇನ್ಸ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕಿ ನಯನಾ ವಿ ರೈ, ಅರಿಯಡ್ಕ ಗ್ರಾ.ಪಂ ಪಿಡಿಓ ಪದ್ಮ, ಕುಮಾರಿ, ಸದಸ್ಯ ರಾಜೇಶ್ ಮಣಿಯಾಣಿಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆದಂಬಾಡಿ ವಲಯ ಮೇಲ್ವಿಚಾರಕಿ ರೋಹಿಣಿ ಎ,ಎನ್., ಸುದ್ದಿ ಬಿಡುಗಡೆ ಪ್ರತಿನಿಧಿ ಕುತ್ಯಾಡಿ ತಿಲಕ್ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಪುರುಷರಿಗೆ ಮಡಿಕೆ ಒಡೆಯುವುದು, ಕಬಡ್ಡಿ, ಹಿಮ್ಮುಖ ಓಟ, ಹಗ್ಗ ಜಗ್ಗಾಟ, ಮಹಿಳೆಯರಿಗೆ ಮಡಕೆ ಒಡೆಯುವುದು, ಲಿಂಬೆ ಚಮಚ, ಸಂಗೀತ ಕುರ್ಚಿ, ತ್ರೋಬಾಲ್ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿದೆ. ಅಲ್ಲದೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ದಂಪತಿಗಳಿಗೆ ಹಾಗೂ ಹಿರಿಯರಿಗೆ ವಿಶೇಷ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ ಸ್ತಳಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಮೋಹನ ರೈ ಓಲೆಮುಂಡೋವು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮೆಸ್ಕಾಂ ಮಂಗಳೂರು ಕುಲಶೇಖರ ಇದರ ಕಿರಿಯ ಇಂಜಿನಿಯರ್ ರಾಜೇಶ್ ಬಿ., ಕಿರುತೆರೆ ನಟಿ ಭವ್ಯಶ್ರೀ ಪೂಜಾರಿ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ, ಯುವ ಸನ್ಮಾನ್ ರಾಷ್ಟ್ರಪ್ರಶಸ್ತಿ ಪುರಸ್ಕೃತ, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ನಿರೂಪಕಿ ರೇಣುಕಾ ಕಣಿಯೂರು, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ನ ಮೋಹನದಾಸ್ ರೈ, ತಾಲೂಕು ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಅಶೋಕ ತ್ಯಾಗರಾಜನಗರ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ವಿಷ್ಣು ಫ್ರೆಂಡ್ಸ್ನ ಅಧ್ಯಕ್ಷ ಜನಾರ್ದನ ಪೂಜಾರಿ ಮಜ್ಜಾರು, ಸಂಘಟಕ ರಾಜೇಶ್ ಕೆ.ಮಯೂರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಿಶ್ವನಾಥ ಗೌಡ ಪಾಪೆಮಜಲು, ಪ್ರಗತಿಪರ ಹಿರಿಯ ಕೃಷಿಕ ಸುಂದರ ಮಣಿಯಾಣಿ ಪೊನ್ನೆತ್ತಡ್ಕ ಹಾಗೂ ಆಂಜನೇಯ ದೈವ ನರ್ತಕ ಶೀನ ನಲಿಕೆಯವರನ್ನು ಸನ್ಮಾನಿಸಲಾಗುವುದು. ರಾತ್ರಿ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಅಂಚಗೆ ಇಂಚಗೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಭೋಜನ ನಡೆಯಲಿದೆ ಎಂದು ಅವರು ತಿಳಿಸಿದರು.
ಸಮಾಜ ಸೇವೆಗೆ ರೂ.೧.೭೫ಲಕ್ಷ:
ಶ್ರಮ, ಸೇವೆ ಹಾಗೂ ಸಹಾಯ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಮಜ್ಜಾರಡ್ಕ ಶ್ರೀ ವಿಷ್ಣು ಫ್ರೆಂಡ್ಸ್ ಕ್ರೀಡೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ. ತನ್ನ ಸಹಾಯನಿಧಿ ಯೋಜನೆಯ ಮೂಲಕ ರೂ.೧.೭೫ಲಕ್ಷವನ್ನು ಸಮಾಜ ಸೇವೆಗೆ ಸಂಘಟನೆ ವಿನಿಯೋಗ ಮಾಡಿದೆ ಎಂದು ಕೋಚಣ್ಣ ಪೂಜಾರಿ ತಿಳಿಸಿದರು.
ವಿಶೇಷ ಆಕರ್ಷಣೆ:
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕೊರಗಜ್ಜನ ಹಾಡಿನೊಂದಿಗೆ ಪ್ರಸಿದ್ಧಿಯಾದ ಬಾಲ ಗಾನ ಪ್ರತಿಭೆ ಕಾರ್ತಿಕ್ ಕಾರ್ಕಳ ಹಾಗೂ ಕಲರ್ಸ್ ಕನ್ನಡದ ಮಂಗಳ ಗೌರಿ ಮದುವೆ ಹಾಗೂ ಉದಯ ಟಿವಿಯ ಸುಂದರಿ ಧಾರಾವಾಹಿಯ ನಟಿ ಭವ್ಯಶ್ರೀ ಪೂಜಾರಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ವಿಷ್ಣು ಫ್ರೆಂಡ್ಸ್ನ ಅಧ್ಯಕ್ಷ ಜನಾರ್ದನ ಮಜ್ಜಾರು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಗೋಳ್ತಿಲ, ಜತೆ ಕಾರ್ಯದರ್ಶಿ ಉದಯ ಸ್ವಾಮಿನಗರ, ಖಜಾಂಚಿ ಗುರುಪ್ರಸಾದ್ ಮಜ್ಜಾರು ಹಾಗೂ ಸಂಘಟಕ ರಾಜೇಶ್ ಕೆ.ಮಯೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.