ಪುತ್ತೂರು: ಫೆ. 7 ಮತ್ತು 8ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜ. ೧೪ ರಂದು ಪೂರ್ವಹ್ನ ದೇವಾಲಯದಲ್ಲಿ ಜರಗಿತು.
ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಸವಣೂರುರವರು ಪೂಜಾ ವಿಧಿ ವಿಧಾನವನ್ನು ನೇರವೇರಿಸಿದರು. ಅರ್ಚಕ ನಾರಾಯಣ ಬಡೆಕಿಲ್ಲಾಯ ಸವಣೂರು, ಜೋತಿಷ್ಯ ವಿಶ್ವಮೂರ್ತಿ ಬಡೆಕಿಲ್ಲಾಯ ಸವಣೂರು, ಅರ್ಚಕ ಕಾರ್ತಿಕ್ ಬಡೆಕಿಲ್ಲಾಯ ಸವಣೂರು, ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ದಯಾನಂದ ಮಾಲೆತ್ತಾರು, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಉಪಾಧ್ಯಕ್ಷ ವಿಠಲ ರೈ ನೆಕ್ಕರೆ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಪ್ರಧಾನ ಕಾರ್ಯದರ್ಶಿ ರಾಘುವ ಗೌಡ ಗುರುಪುತ್ತಾರು ಸವಣೂರು, ಉಪಾಧ್ಯಕ್ಷರಾದ ಗಂಗಾಧರ್ ಸುಣ್ಣಾಜೆ, ಸತೀಶ್ ಬಲ್ಯಾಯ ಕನಡಕುಮೇರು, ಶ್ರೀಧರ್ ಸುಣ್ಣಾಜೆ, ಶ್ರೀ ಶಿರಾಡಿ ದೈವದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲು, ಉಪಾಧ್ಯಕ್ಷ ಭಾಸ್ಕರ್ ಗೌಡ ಅಡೀಲು, ಸವಣೂರು ಸಿ.ಎ,ಬ್ಯಾಂಕ್ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಶ್ರವಣರಂಗ ಸಂಚಾಲಕ ತಾರಾನಾಥ ಸವಣೂರು, ಸಂಧ್ಯಾ ವಿ.ಶೆಟ್ಟಿ ಸವಣೂರುಗುತ್ತು, ಬೆಳಂದೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಸುಗುಣ ಭಟ್ ಬರೆಪ್ಪಾಡಿ, ಜಯರಾಮ ಗುರುಪುತ್ತಾರು ಸವಣೂರು, ಮೂಡಂಬೈಲು ಜಯರಾಮ ರೈ, ಪ್ರಭಾಕರ್ ಶೆಟ್ಟಿ ನಡುಬೈಲು, ದಾಮೋದರ ಗೌಡ ಪಟ್ಟೆ, ಜತ್ತಪ್ಪ ಗೌಡ ಗುರುಪುತ್ತಾರು, ವೆಂಕಪ್ಪ ಗೌಡ ಅಡೀಲು, ಪ್ರಮೋದ್ ಕುಮಾರ್ ರೈ, ರವಿಪ್ರಸಾದ್ ರೈ ಮುಗೇರು, ರಾಜೇಶ್ ರೈ ಮುಗೇರು, ರುಕ್ಮಯ್ಯ ಗೌಡ ಹೊಸವೊಕ್ಲು, ವಿಶ್ವನಾಥ ಗೌಡ ನೆಕ್ಕರೆ, ಜಯಪ್ಪ ಗೌಡ ಸವಣೂರು, ಚಂದ್ರಶೇಖರ್ ಅಂಬಟೆತಡಿ, ಪ್ರಕಾಶ್ ಪಟ್ಟೆ, ಪ್ರವೀಣ್ ಕುಮಾರ್ ರೈ, ಹರಿಪ್ರಸಾದ್ ಅಂಗಡಿಮೂಲೆ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.
ಜಾತ್ರೋತ್ಸವ ಈ ರೀತಿ ನಡೆಯಲಿದೆ
ಸವಣೂರು ದೇವಾಲಯದ ಜಾತ್ರೋತ್ಸವವು ಫೆ. ೬ ರಂದು ಬೆಳಿಗ್ಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಸವಣೂರು ಬಸದಿ ವಠಾರದಿಂದ ಹೊರಟು, ಪರಣೆ ಮಾರ್ಗವಾಗಿ ಸವಣೂರು ದೇವಾಲಯಕ್ಕೆ ತಲುಪಲಿದೆ. ಫೆ. ೭ ರಂದು ಪೂರ್ವಹ್ಮ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಅಗಮಿಸಲಿದ್ದಾರೆ, ಬಳಿಕ ದೇವಾಲಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ಜರಗಲಿದೆ, ರಾತ್ರಿ ದೇವರ ಬಲಿ, ಶ್ರೀ ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ, ಸವಣೂರುಗುತ್ತು ಕುಟುಂಬಸ್ಥರ ಸೇವಾರ್ಥವಾಗಿ ಅನ್ನದಾನ ನಡೆಯಲಿದೆ. ಫೆ, ೮ ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. ಮದ್ಯಾಹ್ನ ಸವಣೂರು ಕೆ.ಸೀತಾರಾಮ ರೈರವರ ಸೇವಾರ್ಥ ಅನ್ನ ಸಂತರ್ಪಣೆ ನಡೆಯಲಿದ್ದು, ರಾತ್ರಿ ಸವಣೂರು ಶ್ರೀ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ ಜರಗಲಿದೆ. ಬೆಂಗಳೂರಿನ ಕವಿತಾ ವಿ.ಶೆಟ್ಟಿ ಮತ್ತು ದೇಷ್ನಾ ಶೆಟ್ಟಿ ಸೇವಾರ್ಥ ಅನ್ನಸಂತರ್ಪಣೆ ನೇರವೇರಲಿದೆ. ದೇವಾಲಯಕ್ಕೆ ಬಾಬು ಗೌಡ ಮತ್ತು ನಾರಾಯಣ ಪೂಜಾರಿ ಕೆಯ್ಯೂರುರವರ ಸೇವಾರ್ಥ ಹೂವಿನ ಅಲಂಕಾರ ನಡೆಯಲಿದೆ.
ಸರ್ವರ ಸಹಕಾರ ಅಗತ್ಯ-ಸೀತಾರಾಮ ರೈ
ಜಾತ್ರೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುವಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು, ಜೊತೆಗೆ ನಮ್ಮೂರಿನ ಜಾತ್ರೆ ಹತ್ತೂರಿಗೆ ಹೆಸರನ್ನು ತರುವ ಕಾರ್ಯ ಅಗಬೇಕು. ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ.
– ಸೀತಾರಾಮ ರೈ ಸವಣೂರು
ಅಧ್ಯಕ್ಷರು,ಉತ್ಸವ ಸಮಿತಿ