ಪುತ್ತೂರು : ಜೀರ್ಣೋದ್ಧಾರಗೊಳ್ಳುತ್ತಿರುವ ದೇಂತಡ್ಕ ಶ್ರೀವನಶಾಸ್ತಾರ ಸಪರಿವಾರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಇಷ್ಟಿಕಾನ್ಯಾಸ(ದಾರಂದ ಮುಹೂರ್ತ) ಕಾರ್ಯಕ್ರಮ ಜ.೧೮ರಂದು ಬೆಳಿಗ್ಗೆ ನಡೆಯಲಿದೆ. ವೇ.ಮೂ. ಮಿತ್ತೂರು ಸದಾಶಿವ ಭಟ್ರವರ ಹಿರಿತನದಲ್ಲಿ ವೇ.ಮೂ.ಮಿತ್ತೂರು ತಿರುಮಲೇಶ್ವರ ಭಟ್ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಎಡನೀರು ಸಂಸ್ಥಾನದ ಶ್ರೀಸಚ್ಚಿದಾನಂದ ಭಾರತೀ ಸ್ವಮೀಜಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.