ಕಾಣಿಯೂರು : ಎಣ್ಮೂರು ಗ್ರಾಮದ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ,ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು,ಪರಿವಾರ ದೈವಗಳ ದೈವಸ್ಥಾನ ಇದರ ಪುನಃಪ್ರತಿಷ್ಡಾ ಬ್ರಹ್ಮಕಲಶೋತ್ಸವವು ಜ.16ರಿಂದ ಜ.18 ರವರೆಗೆ ನಡೆಯಲಿದ್ದು,ಇಲ್ಲಿಗೆ ಕಾರ್ಕಳದಿಂದ ಶ್ರೀದೇವರ ಬಿಂಬ ಆಗಮನವಾಗಲಿದ್ದು ಕಾಣಿಯೂರಿನಿಂದ ಶ್ರೀ ಕ್ಷೇತ್ರ ಕೆಮ್ಮಲೆವರೆಗೆ ಮೆರವಣಿಗೆ ಮೂಲಕ ತರಲಾಗುವುದು.
ಈ ಮೆರವಣಿಗೆಗೆ ಬೆಳಿಗ್ಗೆ 10.30 ಗೆ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಕರಂದ್ಲಾಜೆ, ಕಾಣಿಯೂರು ಶ್ರೀ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಚಾಲನೆ ನೀಡುವರು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.