ಪುತ್ತೂರು: ಇಲ್ಲಿನ ಕೋರ್ಟ್ರಸ್ತೆಯ ಪುತ್ತೂರು ಸೆಂಟರ್ ಎದುರುಗಡೆಯ ನಗರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇದಿನಿ ಜನಸೇವಾ ಕೇಂದ್ರದ ಎರಡನೇ ಶಾಖೆಯಾದ ಮೇದಿನಿ ಇ-ಸೇವಾ ಕೇಂದ್ರವು ಮಿನಿ ವಿಧಾನಸೌಧದ ಬಳಿಯ ರಾಧಾಕೃಷ್ಣ ರಸ್ತೆಯಲ್ಲಿನ ತಾಲೂಕು ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಜ.೧೬ ರಂದು ಶುಭಾರಂಭಗೊಳ್ಳಲಿದೆ.
ಈ ಸೇವಾ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಲಿಂಕ್, ಹೆಸರು ಬದಲಾವಣೆ, ಜನ್ಮದಿನಾಂಕ, ವಿಳಾಸ ಬದಲಾವಣೆ ಮಾಡಿಕೊಡಲಾಗುವುದು. ಸಂಸ್ಥೆಯು ಅಗತ್ಯ ಸೇವೆಗಳಾದ ಪಾನ್ಕಾರ್ಡ್ ತಕ್ಷಣ, ರೇಶನ್ ಕಾರ್ಡ್ ಅರ್ಜಿ, ರೇಶನ್ ಕಾರ್ಡ್ ಪ್ರಿಂಟ್, ವಿದ್ಯಾಸಾರಥಿ ಸ್ಕಾಲರ್ಶಿಪ್, ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಡೌನ್ಲೋಡ್, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಸ್ಕಾಲರ್ಶಿಪ್, ಜೀವನ್ ಪ್ರಮಾಣ್ ಪತ್ರ, ಜಾತಿ ಆದಾಯ, ಖಜಾನೆ-೨, ಕರ್ನಾಟಕದ ಎಲ್ಲಾ ಜಿಲ್ಲೆಯ ಆರ್.ಟಿ.ಸಿ, ವಾಸ್ತವ್ಯ ಪ್ರಮಾಣ ಪತ್ರ, ಸ್ಮಾರ್ಟ್ ಕಾರ್ಡ್ ಪ್ರಿಂಟ್(ಡಿ.ಎಲ್ ಮತ್ತು ಆರ್.ಸಿ), ಹಿರಿಯ ನಾಗರಿಕರ ಕಾರ್ಡ್ಗೆ ಅರ್ಜಿ, ನವೋದಯ ಶಾಲೆಯ ಅರ್ಜಿ, ಪಾಸ್ಪೋರ್ಟ್ಗೆ ಅರ್ಜಿ, ಜೆರಾಕ್ಸ್ ಮತ್ತು ಕಲರ್ ಜೆರಾಕ್ಸ್, ವೋಟರ್ ಐಡಿ, ಸರಕಾರಿ ಹುದ್ದೆಗೆ ಅರ್ಜಿ, ಲೈಫ್ ಇನ್ಸೂರೆನ್ಸ್ ಅಲ್ಲದೆ ಇನ್ನಿತರ ಆನ್ಲೈನ್ ಸೇವೆಗಳೊಂದಿಗೆ, ಐಸಿಐಸಿಐ ಲೋಂಬಾರ್ಡ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್, ಮೋಟಾರ್ ಕಾಂಪ್ರೆಹೆನ್ಸಿವ್ ಯೂನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್, ರಿಲಯನ್ಸ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸುರೆನ್ಸ್, ವಿವಿಧ ಕಂಪೆನಿಯ ಇನ್ಸೂರೆನ್ಸ್ ಜೊತೆಗೆ ಇಪಿಎಫ್ ಕ್ಲೈಮ್, ಇ-ನಾಮಿನಿ ವ್ಯವಸ್ಥೆಯನ್ನು ಕೂಡ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಜಿಟಲ್ ಸೇವಾ ಸಿಂಧೂ ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರದ ಜನಸೇವಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ `ಉತ್ತಮ ಸೇವಾ ಕೇಂದ್ರ’ ಎಂಬ ಪ್ರಶಸ್ತಿಗೆ ಮೇದಿನಿ ಜನಸೇವಾ ಕೇಂದ್ರವು ಭಾಜನರಾಗಿದೆ. ಹೆಚ್ಚಿನ ಮಾಹಿತಿಗಾಗಿ 08251-298127, 9449609096 ನಂಬರಿಗೆ ಸಂಪರ್ಕಿಸಬಹುದು.