ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಜ.14ರಂದು ರಾತ್ರಿ ಶ್ರೀ ಶಾಸ್ತಾರ ದೇವರಿಗೆ ಮಹಾರಂಗಪೂಜೆ ಹಾಗೂ ಧನುಪೂಜೆಯ ಪ್ರಯುಕ್ತ ವರ್ಷಂಪ್ರತಿಯಂತೆ ದುರ್ಗಾಪೂಜೆ ನಡೆಯಿತು.
ಸಾಯಂಕಾಲ ೬ರಿಂದ ಕುಣಿತ ಭಜನೆ ನಡೆಯಿತು. ಭಜನಾ ಕಾರ್ಯಕ್ರಮವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ದೀಪಬೆಳಗಿಸಿ ಚಾಲನೆ ನೀಡಿದರು. ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ ಹಾಗೂ ಮುರಳಿಧರರವರು ವಿಧಿವಿಧಾನವನ್ನು ನೆರವೇರಿಸಿದರು. ಸುದರ್ಶಣ್ ವೈಲಾಯರವರು ಸಹಕರಿಸಿದರು.