HomePage_Banner
HomePage_Banner
HomePage_Banner
HomePage_Banner

ಕೂರ್ನಡ್ಕ: ಮಸೀದಿಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜಾಮೀನು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮೂರು ದಿನಗಳ ಹಿಂದೆ ಕೂರ್ನಡ್ಕ ಸಮೀಪ ಕಾಲೇಜು ವಿದ್ಯಾರ್ಥಿಯೋರ್ವರಿಗೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಲ್ಲಿನ ಫಿಲೋಮಿನಾ ಕಾಲೇಜು ವಿದ್ಯಾರ್ಥಿ, ಪಾಲ್ತಾಡು ಸಮೀಪದ ನಿವಾಸಿಯಾಗಿರುವ ಮಹಮ್ಮದ್ ಅಸ್ಪದ್ ಅಝ್ವಿದ್ ಎಂಬವರು ಜ.೧೨ರಂದು ಮಧ್ಯಾಹ್ನ ಪ್ರಾರ್ಥನೆಗೆಂದು ಕೂರ್ನಡ್ಕ ಮಸೀದಿಗೆ ಹೋಗುತ್ತಿದ್ದ ವೇಳೆ ಬದ್ರುದ್ದೀನ್ ಮತ್ತು ಝಹೀರ್ ಅಮಾನ್ ಮತ್ತಿತರರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.ಪೂರ್ವದ್ವೇಷದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ನೀಡಲಾದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳಾದ ಬದ್ರುದ್ದೀನ್ ಮತ್ತು ಝಹೀರ್ ಅಮಾನ್‌ರವರು ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದು ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಅಬ್ದುಲ್ ರಹಿಮಾನ್ ಹಿರೇಬಂಡಾಡಿ, ರಮೀಝ್ ಕರ್ವೇಲು ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.