ಪುತ್ತೂರು: ತಪ್ಪುಗಳನ್ನು ಸರಿಪಡಿಸುವುದೇ ಜಮಾ ಬಂದಿಯ ಉದ್ದೇಶ. ಈ ಮಟ್ಟಿಗೆ ಪುತ್ತೂರಿನಲ್ಲಿ ಎಲ್ಲಾ ವರ್ಕ್ ಪ್ರೋಗ್ರೆಸ್ನಲ್ಲಿದೆ ಎಂದು ಜಿ.ಪಂ ಯೋಜನಾ ನಿರ್ದೇಶಕ ಮಧು ಕುಮಾರ್ ತಿಳಿಸಿದರು.
ಪುತ್ತೂರು ತಾ.ಪಂ ಸಭಾಂಗಣದಲ್ಲಿ ಜ.15ರಂದು ತಾ.ಪಂ 2019-20ನೇ ಸಾಲಿನ ಜಮಾಬಂದಿಯು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾ ಬಂದಿಯಲ್ಲಿ ವರದಿ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಕ್ಷಣ ಸ್ಪಂಧನೆ ಸಿಗುತ್ತದೆ. ಪುತ್ತೂರಿನ ಮಟ್ಟಿಗೆ ಎಲ್ಲಾ ವರ್ಕ್ಗಳು ಪ್ರೋಗ್ರೆಸ್ನಲ್ಲಿದೆ. ಕೆಲವೊಂದು ಕಡೆ ಸಮಸ್ಯೆ ಇದೆ. ತಪ್ಪುಗಳನ್ನು ಸರಿಪಡಿಸುವುದೇ ಜಮಾ ಬಂದಿಯ ಉದ್ದೇಶ. ಈ ನಿಟ್ಟಿನಲ್ಲಿ ಹೆಚ್ಚಿನ ಸದಸ್ಯರು ಸಭೆಗೆ ಹಾಜರಾಗಬೇಕಾಗಿತ್ತು ಎಂದರು. ಈ ಭಾರಿಯ ಜಮಾಬಂದಿಯಲ್ಲಿ ಕಡಬ ಸೇರಿದೆ. ಮುಂದಿನ ಜಮಾ ಬಂದಿಯಲ್ಲಿ ಕಡಬ ಸೇರಿರುವುದಿಲ್ಲ ಎಂದು ಮಾಹಿತಿ ನೀಡಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಸದಸ್ಯರಾದ ದಿವ್ಯ ಪುರುಷೋತ್ತಮ, ಮೀನಾಕ್ಷಿ ಮಂಜುನಾಥ್, ಸುಜಾತಕೃಷ್ಣ, ಭವಾನಿ ಚಿದಾನಂದ ಉಪಸ್ಥಿತರಿದ್ದರು. ಜಮಾ ಬಂದಿಯಲ್ಲಿ ಬಹುತೇಕ ಮಂದಿ ತಾ.ಪಂ ಸದಸ್ಯರು ಗೈರಾಗಿದ್ದರು.