HomePage_Banner
HomePage_Banner
HomePage_Banner
HomePage_Banner

ಕಾಣಿಯೂರಿನಲ್ಲಿ ಕೆಮ್ಮಲೆ ಶ್ರೀ ಕ್ಷೇತ್ರದ ನಾಗಬ್ರಹ್ಮ ದೇವರ ಬಿಂಬಕ್ಕೆ ಅದ್ದೂರಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಎಣ್ಮೂರು ಗ್ರಾಮದ ಕೆಮ್ಮಲೆ ಹೇಮಳದಲ್ಲಿರುವ ಇತಿಹಾಸ ಪ್ರಸಿದ್ಧ ನಾಗಬ್ರಹ್ಮ ದೇವಸ್ಥಾನ ಮತ್ತು ಬ್ರಹ್ಮರ ಮೂಲಸ್ಥಾನ ಉಳ್ಳಾಕುಲು, ಚಾಮುಂಡಿ ಹಾಗೂ ಪರಿವಾರ ದೈವಗಳ ಗುಡಿಗಳು ನವೀಕರಣಗೊಂಡಿದ್ದು, ಜ.16ರಿಂದ ಜ.18 ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಜ೧೬ರಂದು ಬೆಳಿಗ್ಗೆ ಕಾರ್ಕಳದಿಂದ ಶ್ರೀ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವರ ಬಿಂಬವನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕೆಮ್ಮಲೆ ಶ್ರೀ ಕ್ಷೇತ್ರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಕಾಣಿಯೂರಿನಲ್ಲಿ ದೇವರ ಬಿಂಬಕ್ಕೆ ಕಾಣಿಯೂರಿನಲ್ಲಿ ಅದ್ಧೂರಿ ಸ್ವಾಗತ ದೊರಕಿದೆ.

ಕಾಣಿಯೂರಿನಲ್ಲಿ ಕೆಮ್ಮಲೆ ಶ್ರೀ ಕ್ಷೇತ್ರದ ದೇವರ ಬಿಂಬಕ್ಕೆ ಅದ್ಧೂರಿ ಸ್ವಾಗತ…
ಶ್ರೀ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವರ ಬಿಂಬವು ಕಾರ್ಕಳದಿಂದ ತರುವ ಸಂದರ್ಭದಲ್ಲಿ ಜ ೧೬ರಂದು ಕಾಣಿಯೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದ ತಂಡದವರ ಕೇರಳ ಕಲಾ ಶೈಲಿಯ ಚೆಂಡೆವಾದನವು ಮೆರವಣಿಗೆಯಲ್ಲಿ ಮೆರುಗನ್ನು ನೀಡಿದವು. ದೇವರ ಬಿಂಬವನ್ನು ಬಳಿಕ ಕಾಣಿಯೂರಿನಿಂದ ಅಲೆಕ್ಕಾಡಿಯ ಮೂಲಕ ಮೆರವಣಿಯಲ್ಲಿ ಶ್ರೀ ಕ್ಷೇತ್ರ ಕೆಮ್ಮಲೆಗೆ ತರಲಾಯಿತು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಹಾಗೂ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲರವರು ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಮ್ಮಲೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಗಂಗಾಧರ ಗೌಡ ಹೇಮಳ ಇಡ್ಯಪೆ, ಪ್ರಧಾನ ಸಂಚಾಲಕ ಬಾಲಕೃಷ್ಣ ಕೆ, ಪ್ರಧಾನ ಕಾರ್ಯದರ್ಶಿ ಜಯರಾಮ ಐಪಳ. ಉಪಾಧ್ಯಕ್ಷರಾದ ಧನಂಜಯ ಕೇನಾಜೆ, ಗೋಪಾಲಕೃಷ್ಣ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ, ಆಡಳಿತ ಮಂಡಳಿಯ ಅಧ್ಯಕ್ಷ ಜಯಾನಂದ, ಕೆಮ್ಮಲೆ ಶ್ರೀ ನಾಗಬ್ರಹ್ಮ ಹಾಗೂ ಶ್ರೀ ಬ್ರಹ್ಮರು ಉಳ್ಳಾಕುಲು ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾರಾಯಣ ಕೋರ್ಜೆ, ಶ್ರೀ ಬ್ರಹ್ಮರು ಉಳ್ಳಾಕುಲು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪ್ರಮುಖರಾದ ವಸಂತ ನಡುಬೈಲ್, ಪ್ರದೀಪ್ ಬೊಬ್ಬೆಕೇರಿ, ಕಾಣಿಯೂರು ಗ್ರಾ.ಪಂ, ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ ಸೇರಿದಂತೆ ಕೆಮ್ಮಲೆ ಶ್ರೀ ಕ್ಷೇತ್ರದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಕಾಣಿಯೂರಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.