ಪುತ್ತೂರು: ಪರ್ಪುಂಜದ ಪಡ್ಪುನಲ್ಲಿರುವ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಮತ್ತು ಗುಳಿಗ ಕಲ್ಲುರ್ಟಿ ಸನ್ನಿಧಿಯಲ್ಲಿ ಗುಳಿಗ, ಕಲ್ಲುರ್ಟಿ ಮತ್ತು ಸ್ವಾಮೀ ಕೊರಗಜ್ಜ ದೈವದ ನೇಮೋತ್ಸವದ ಪ್ರಯುಕ್ತ ಜ.೧೬ ರಂದು ಬೆಳಿಗ್ಗೆ ಗಣಹೋಮ ನಡೆಯಿತು. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪಕೀರ ಬೊಟ್ಟತ್ತಾರು ಮತ್ತು ಶಂಕರ ಪಡ್ಪು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಇಂದು ನೇಮೋತ್ಸವ
ಸಂಜೆ ರಾಘವೇಂದ್ರ ಭಟ್ ಕೊಡಂಬೆಟ್ಟು ಇವರ ಆಗಮನ ಬಳಿಕ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಕಲ್ಲುರ್ಟಿ ದೈವದ ನೇಮ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ರಿಂದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ. 12 ರಿಂದ ಬೆಳಿಗ್ಗೆಯ ತನಕ ಕರಿಗಂಧ ಪ್ರಸಾದ ವಿತರಣೆ ನಡೆಯಲಿದೆ.ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಗಂಧಪ್ರಸಾದ ಸ್ವೀಕರಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9482969029 ಗೆ ಸಂಪರ್ಕಿಸಬಹುದಾಗಿದೆ.