HomePage_Banner
HomePage_Banner
HomePage_Banner
HomePage_Banner

ಜ 17-25 ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ.19 ದೇವರ ರಥೋತ್ಸವ, ಪಲ್ಲಕ್ಕಿ ಉತ್ಸವ ಜ.20 ದರ್ಶನ ಬಲಿ ಉತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವರ ವರ್ಷಾವಧಿ ಜಾತ್ರೆ ಮತ್ತು ಅಮರಕಾಸ್ಪಾಡಿ ಜೋಡುದೈವಗಳ ನೇಮೋತ್ಸವ ಜ.೧೭ ರಿಂದ ಜ ೨೫ ರವರೆಗೆ ಜರಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಜ.೧೭ ರಂದು ಬೆಳಿಗ್ಗೆ ದೇವಸ್ಥಾನಕ್ಕೆ ದೈವಗಳ ಭಂಡಾರ ಆಗಮನ, ಬೆಳಿಗ್ಗೆ ಧ್ವಜಾರೋಹಣ, ಮಹಾಪೂಜೆ, ಕರಂದ್ಲಾಜೆ ಪೂವಕ್ಕ ಮೋನಪ್ಪ ಗೌಡ ಮನೆಯವರಿಂದ ಶ್ರೀ ದೇವರ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ.
ರಾತ್ರಿ ನಾಲ್ಕಂಭ, ಮುದ್ವ, ಬಾರೆಂಗಳ, ಕಲಾಯಿವರೆಗೆ ದೇವರ ಪೇಟೆ ಸವಾರಿ ಜರಗಲಿದೆ. ಜ೧೮ ರಂದು ಬೆಳಿಗ್ಗೆ ನಿತ್ಯಬಲಿ, ಮಹಾಪೂಜೆ, ರಾತ್ರಿ ಅಯೋಧ್ಯೆ, ದೇವರಗುಡ್ಡೆ, ಎರ್ಕ, ಎಣ್ಮೂರು ಕಟ್ಟೆಯವರೆಗೆ ಪೇಟೆ ಸವಾರಿ. ಜ.೧೯ ರಂದು ಬೆಳಿಗ್ಗೆ ನಿತ್ಯಬಲಿ, ಮಹಾಪೂಜೆ, ಸಂಜೆ ಚಾರ್ವಾಕ ಮತ್ತು ಇಡ್ಯಡ್ಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜಗಲಿದ್ದು, ರಾತ್ರಿ ಮಹಾರಂಗಪೂಜೆ, ಪಲ್ಲಕ್ಕಿ ಉತ್ಸವ, ದೇವರ ರಥೋತ್ಸವ ನಡೆಯಲಿದೆ. ಜ.೨೦ ರಂದು ಬೆಳಿಗ್ಗೆ ದರ್ಶನ ಬಲಿ, ದೈವಗಳ ಬೇಟಿ, ಬಟ್ಟಲು ಕಾಣಿಕೆ. ರಾತ್ರಿ ಕಲಾಯಿ ಕಟ್ಟೆಪೂಜೆ, ಚಾಮುಂಡಿ ನೇಮ, ಉತ್ಸವ ಬಲಿ, ಅಷ್ಟವಧಾನ ಸೇವೆ ಮತ್ತು ಶಯನ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ. ಜ.೨೧ ರಂದು ಬೆಳಿಗ್ಗೆ ಕವಟೋದ್ಘಾಟನೆ, ಸಾಯಂಕಾಲ ಕುಮಾರಧಾರ ನದಿಗೆ ಅವಭೃತ ಸ್ನಾನ ಹಿಂದಿರುಗಿ ಬಂದು ಬಟ್ಟಲುಕಾಣಿಕೆ ಮತ್ತು ಧ್ವಜಾವರೋಹಣ, ಧಾರ್ಮಿಕ ಸಭೆ, ಯPಗಾನ ಬಯಲಾಟ ಜರಗಲಿದೆ. ಜ.೨೨ ರಂದು ಶ್ರೀ ದೇವರ ಸಂಪ್ರೋPಣೆ, ಬೆಳಿಗ್ಗೆ ಅಮರಕಾಸ್ಪಾಡಿ ಇರ್ವೆರ ಉಳ್ಳಾಕುಲು ನೇಮೋತ್ಸವಕ್ಕೆ ಗೊನೆ ಕಡಿಯುವುದು, ಇರ್ವೆರ ಉಳ್ಳಾಕುಲ ಭಂಡಾರ ತೆಗೆದು ದೈವಗಳ ವಾಲಸರಿ, ಜ.೨೩ ರಂದು ರಾತ್ರಿ ಕೀಲೆ ಮಾಡದಲ್ಲಿ ಪೂಮಾಣಿ ದೈವ ಮತ್ತು ಪೂವಲಂಕಮ್ಮ ದೆಯ್ಯೆರೆ ನೇಮೋತ್ಸವ. ಜ.೨೪ ರಂದು ಕಳಂಗಾಜೆ ಮಾಡದಲ್ಲಿ ಕಿನ್ನಿಮಾಣಿ, ಚಂದು ನಾಯರ, ಮರ್ಲ್‌ಮಾಣಿ, ಹಳ್ಳತ್ತಾಯ ಮತ್ತು ಇತರ ಉಪದೈವಗಳ ನೇಮೋತ್ಸವ, ಜ.೨೫ ರಂದು ಅಮ್ಮನವರ ಪೂಜೆ, ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ ಎಂದು ದೇವಸ್ಥಾನದಿಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.