ಪುತ್ತೂರು: ಆತೂರು ಬಾಲಕೃಷ್ಣ ರಾವ್ ಮತ್ತು ಸರೋಜಾ ದಂಪತಿ ಪುತ್ರ ಉದಯಕುಮಾರ್ರವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿರುವ ಇವರು 1993ರಿಂದ 2000 ವರೆಗೆ ಸುಳ್ಯ ಠಾಣೆ, 2000ದಿಂದ 2010ರವರೆಗೆ ವಿಟ್ಲ ಠಾಣೆ, 2010ರಿಂದ 2013ರವರೆಗೆ ಉಪ್ಪಿನಂಗಡಿ ಮತ್ತು 2013 ರಿಂದ 2020ರವರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಎಎಸ್ಐ ಆಗಿ ಪದೋನ್ನತಿಗೊಂಡು ಸುಳ್ಯ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಬಾಲ್ಯದ ವಿದ್ಯಾಭ್ಯಾಸವನ್ನು ಆತೂರು ಮತ್ತು ಅಜ್ಜಾವರದಲ್ಲಿ ಪೂರೈಸಿ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ರಾಮಕುಂಜದಲ್ಲಿ ಮಾಡಿರುತ್ತಾರೆ, ಬಿಎ ಪದವಿಯನ್ನು ಉಪ್ಪಿನಂಗಡಿಯಲ್ಲಿ ಪೂರೈಸಿರುತ್ತಾರೆ.
ಪತ್ನಿ ಅನುರಾಧಾ, ಪುತ್ರರಾದ ಅನ್ವೇಷ್ ಮತ್ತು ಆಕಾಶ್ ಜೊತೆ ಪುತ್ತೂರಿನ ಕೃಷ್ಣನಗರದಲ್ಲಿ ವಾಸವಾಗಿದ್ದಾರೆ.