ಪುತ್ತೂರು: ೨೦೨೦-೨೧ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನವೆಂಬರ್ ತಿಂಗಳಲ್ಲಿ ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಜಸ್ಮಿತಾ ಎನ್.ಸಿ, ನೂಜಿರವರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ, ಪುತ್ತೂರಿನ ಶಾರದಾ ಕಲಾ ಕೇಂದ್ರ ದ ನೃತ್ಯ ಗುರು ವಿದ್ವಾನ್ ಸುದರ್ಶನ ಎಂ.ಎಲ್. ಭಟ್ರವರ ಶಿಷ್ಯೆಯಾಗಿರುವ ಈಕೆ ಚೆನ್ನಪ್ಪ ಗೌಡ ನೂಜಿ ಮತ್ತು ಪವಿತ್ರ ನೂಜಿ ದಂಪತಿ ಪುತ್ರಿ. ಇವರು ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಾಲಾ ೯ ನೇ ತರಗತಿ ವಿದ್ಯಾರ್ಥಿನಿಯಾಗಿರುತ್ತಾರೆ.