ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕುಲು) ದೇವಸ್ಥಾನ, ವ್ಯಾಘ್ರಚಾಮುಂಡಿ (ರಾಜನ್ ದೈವ) ದೈವಸ್ಥಾನ ಪಡುಮಲೆ ಇದರ ವರ್ಷಾವಧಿ ನೇಮೋತ್ವವದ ಅಂಗವಾಗಿ ಜ.16 ರಂದು ಪೂ 8 ರಿಂದ 48 ಕಾಯಿ ಗಣಪತಿ ಹೋಮ, ಬಳಿಕ ಕಿನ್ನಿಮಾಣಿ ದೈವದ ನೆಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಗಂ 8 ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ. ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಸಮಿತಿ ಸದಸ್ಯರಾದ ದಯಾ ವಿ ರೈ ಬೆಳ್ಳಿಪ್ಪಾಡಿ, ರವಿರಾಜ ರೈ ಸಜಂಕಾಡಿ, ಚಿದಾನಂದ ಗೌಡ ಸಾರಕೂಟೇಲು, ಶ್ರೀಧರ ನಾಯ್ಕ ನೇರ್ಲಂಪಾಡಿ, ಹಾಗೂ ಕ್ಷೇತ್ರ ಸೇನಾವೆರ್ ಲಕ್ಷ್ಮೀ ನಾರಾಯಣ ರಾವ್, ಜನಾರ್ದನ ಪದಡ್ಕ, ಕೆ.ಸಿ ಪಾಟಾಳಿ ಪಡುಮಲೆ, ಗಣೇಶ ಭಟ್ ಈಶಮೂಲೆ, ಉದಯ ಕುಮಾರ್ ಪಡುಮಲೆ, ಪುರಂದರ ರೈ ಕುದ್ಕಾಡಿ, ವೈ.ಕೆ ನಾಯ್ಕ ಪಟ್ಟೆ ರಾಮಣ್ಣ ಗೌಡ ಬಸವನಹಿತ್ತಿಲು ಚಂದ್ರಶೇಖರ ಭಂಡಾರಿ ಭರತೇಶ್ ಮೂಡಾಯೂರು ಹಾಗೂ ಊರಿನವರು ಭಾಗವಹಿಸಿದರು.
ಜ.17 ರಂದು ಪೂಮಾಣಿ ದೈವದ ನೇಮ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂ 8 ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ ನಡೆಯಲಿದೆ.