ನೆಲ್ಯಾಡಿ: ಕುಕ್ಕೆ ಸುಬ್ರಹ್ಮಣ್ಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನೂತನ ಸಚಿವ, ಸುಳ್ಯ ಶಾಸಕ ಎಸ್.ಅಂಗಾರರವರಿಗೆ ಪೆರಿಯಶಾಂತಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.
ಬಿಜೆಪಿ ಬಾವುಟ ಪ್ರದರ್ಶಿಸಿ ಅಂಗಾರಗೆ ಸ್ವಾಗತ ಕೋರಿದ ಕಾರ್ಯಕರ್ತರು ಜಯಕಾರ ಕೂಗಿ ಸಂಭ್ರಮಿಸಿದರು. ಬಿಜೆಪಿ ದ.ಕ.ಜಿಲ್ಲಾ ರೈತ ಮೋರ್ಛಾದ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ದ.ಕ.ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ಎಪಿಎಂಸಿ ಸದಸ್ಯೆ ಪುಲಸ್ತ್ಯ ರೈ, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್, ಮಾಜಿ ಸದಸ್ಯ ಸುಂದರ ಗೌಡ ಅತ್ರಿಜಾಲು, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಉದಯಕುಮಾರ್ ದೋಂತಿಲ, ಸುಧಾಕರ ಜಿ., ಶಿರಾಡಿ ಗ್ರಾ.ಪಂ.ಸದಸ್ಯರಾದ ರಾಧಾ ತಂಗಪ್ಪನ್, ಲಕ್ಷ್ಮಣ ಕುದ್ಕೋಳಿ, ಬಿಜೆಪಿ ಮುಖಂಡರಾದ ರವಿಚಂದ್ರ ಅತ್ರಿಜಾಲು, ರಮೇಶ್ ಶೆಟ್ಟಿಬೀದಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.