ಪೆರಾಬೆ: ಕುಂತೂರು ಗ್ರಾಮದ ನೇರೋಳ್ಪಲ್ಕೆ ಶ್ರೀ ರಾಜನ್ ದೈವಸ್ಥಾನದ ವಾರ್ಷಿಕ ಜಾತ್ರೆ ಜ.೧೩ ಮತ್ತು ೧೪ರಂದು ನಡೆಯಿತು.
ಜ.೧೩ರಂದು ಬೆಳಿಗ್ಗೆ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಪಾಧ್ಯಾಯರ ನೇತೃತ್ವದಲ್ಲಿ ಶುದ್ಧಿ ಕಲಶ ಹಾಗೂ ಗಣಹೋಮ ನಡೆಯಿತು. ಸಂಜೆ ತೋರಣ ಮುಹೂರ್ತ ನಡೆದು ದೈವದ ಭಂಡಾರ ತೆಗೆದು ರಾತ್ರಿ ಕಲ್ಕುಡ, ಕಲ್ಲುರ್ಟಿ ದೈವಗಳ ನರ್ತನೋತ್ಸವ ನಡೆಯಿತು.
ಜ.೧೪ರಂದು ಮುಂಜಾನೆ ಬ್ರಹ್ಮರು ದೈವಗಳ ನರ್ತನೋತ್ಸವ ಹಾಗೂ ಆರಾಧ್ಯ ದೈವ ಶಿರಾಡಿ ದೈವದ ನರ್ತನ, ಬಚ್ಚನಾಕ ದೈವದ ನರ್ತನ, ರಾತ್ರಿ ಗುಳಿಗ ದೈವದ ನರ್ತನೋತ್ಸವ ನಡೆಯಿತು. ರಾತ್ರಿ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ, ಸಿಬ್ಬಂದಿ ಲೋಕನಾಥ ರೈ, ಪುತ್ತೂರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ್ ಶಾಂತಿಗುರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂತೂರು ಒಕ್ಕೂಟದ ಸೇವಾಪ್ರತಿನಿಧಿ ರೇಖಾ, ಮೆಸ್ಕಾಂ ಆಲಂಕಾರು ಶಾಖಾಧಿಕಾರಿ ಮಂಜು ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಠಲ ರೈ ಗುತ್ತುಪಾಲು, ಅಧ್ಯಕ್ಷ ಶಿವಪ್ಪ ಗಔಡ ಶೇಡಿ, ಕಾರ್ಯದರ್ಶಿ ಮೋಹನ ಶೆಟ್ಟಿ ಕೇವಳಪಟ್ಟೆ, ಖಜಾಂಜಿ ನಾಗೇಶ ಗೌಡ ಅರ್ಬಿ, ಸಮಿತಿಯ ಸದಸ್ಯರುಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೈವದ ಗಂಧಪ್ರಸಾದ ಸ್ವೀಕರಿಸಿದರು.