ಪುತ್ತೂರು:ಪ್ರಧಾನ ಮಂತ್ರಿಯವರ ಹವಮಾನಾಧಾರಿತ ಫಸಲ್ಭಿಮಾ ಬೆಳೆ ವಿಮಾ ಯೋಜನೆಯ ತುರ್ತು ಅನುಷ್ಠಾನ ಹಾಗೂ ದೆಹಲಿಯಲ್ಲಿ ನಡೆಯತ್ತಿರುವ ರೈತ ಹೋರಾಟಕ್ಕೆ ಕೇಂದ್ರ ಸರಕಾರದ ನಿರ್ಲಕ್ಷ್ಯ ತೋರಿರವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಜ.೧೮ರಂದು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.