ಪುತ್ತೂರು: ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದಲ್ಲಿ ಜ.17ರಂದು ಸಂಜೆ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಮತ್ತು ಅಶ್ವತ್ಥ ವೃಕ್ಷ ಪೂಜೆ ನಡೆಯಲಿದೆ.
ಮಂದಿರ ಪುರೊಹಿತ ರಘುರಾಮ ಭಟ್ ಅವರ ನೇತೃತ್ವದಲ್ಲಿ ನಡೆಯುವ ಪೂಜೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ವಿನಂತಿಸಿದ್ದಾರೆ.