ಅರಿಯಡ್ಕ: ಶ್ರೀ ವಿಷ್ಣು ಪ್ರೆಂಡ್ಸ್ ಮಜ್ಜಾರಡ್ಕ ಇದರ ವತಿಯಿಂದ ಮೂರನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ಜ17 ರಂದು ಮಜ್ಜಾರು ಗದ್ದೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಅಚ್ಚುತ್ತ ಮಣಿಯಾಣಿ ಮಾಯಿಲ ಕೊಚ್ಚಿ ದೀಪಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಗುರು ವಿದುಷಿ ನಯನ ವಿ ರೈ ಕುದ್ಕಾಡಿ, ಅರಿಯಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ, ಪಂಚಾಯತ್ ಸದಸ್ಯರಾದ ರಾಜೇಶ್ ಎಚ್ ಮತ್ತು ಉಷಾ ರೇಖಾ ರೈ, ಶ್ರೀ ಕ್ಷೇ.ಧ ಗ್ರಾ ಯೋ ಕೆದಂಬಾಡಿ ವಲಯದ ಮೇಲ್ವಿಚಾರಕಿ ರೋಹಿಣಿ ಎ.ಎನ್, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿನಿಧಿ ತಿಲಕ್ ಕುತ್ಯಾಡಿ , ಮಂಜುನಾಥ್ ಬಾಬು ಬೆಂಗಳೂರು ಮತ್ತು ವಿಷ್ಣು ಫ್ರೆಂಡ್ಸ್ ಕ್ಲಬ್ ಮಜ್ಜಾರಡ್ಕ ಇದರ ಸಂಘಟಕ ರಾಜೇಶ್ ಮಯೂರ, ಉಪಸ್ಥಿತರಿದ್ದರು. ಶ್ರೀ ವಿಷ್ಣು ಫ್ರೆಂಡ್ಸ್ ಮಜ್ಜಾರಡ್ಕ ಇದರ ಅಧ್ಯಕ್ಷ ಜನಾರ್ದನ ಮಜ್ಜಾರು ಸಭಾಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಕೋಚಣ್ಣ ಪೂಜಾರಿ ಎಂಡೆ ಸಾಗು ಸ್ವಾಗತಿಸಿ ವಂದಿಸಿದರು. ವಸಂತ ಪೂಜಾರಿ ಮಲಾರ್ ಕಲ್ಲರ್ಪೆ ಮತ್ತು ಭವಿತ್ ಪೂಜಾರಿ ಮಜ್ಜಾರು ಕಾರ್ಯಕ್ರಮ ನಿರೂಪಿಸಿದರು