ಪುತ್ತೂರು: ಪರ್ಪುಂಜದ ಪಡ್ಪುನಲ್ಲಿರುವ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಮತ್ತು ಗುಳಿಗ ಕಲ್ಲುರ್ಟಿ ಸನ್ನಿಧಿಯಲ್ಲಿ ಗುಳಿಗ, ಕಲ್ಲುರ್ಟಿ ಮತ್ತು ಸ್ವಾಮೀ ಕೊರಗಜ್ಜ ದೈವದ ನೇಮೋತ್ಸವವು ಜ.೧೬ ರಂದು ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ನೇತೃತ್ವದಲ್ಲಿ ಗಣಹೋಮ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ರಾಘವೇಂದ್ರ ಭಟ್ ಕೊಡಂಬೆಟ್ಟು ಇವರ ಆಗಮಿಸಿ ಆಶೀರ್ವಚನ ನೀಡಿದರು. ಬಳಿಕ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಗುಳಿಗ ದೈವದ ನೇಮದ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮ ವಿಜೃಂಭಣೆಯಿಂದ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ೧೦ ರಿಂದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಅದ್ಧೂರಿಯಾಗಿ ನಡೆಯಿತು. ಊರ ಪರವೂರ ಭಕ್ತಾಧಿಗಳು ಸೇರಿದಂತೆ ನೂರಾರು ಮಂದಿ ನೇಮೋತ್ಸವ ವೀಕ್ಷಿಸುವ ಮೂಲಕ ದೈವದ ಕೃಪೆಗೆ ಪಾತ್ರರಾದರು. ಬೆಳಿಗ್ಗೆಯ ತನಕ ಕರಿಗಂಧ ಪ್ರಸಾದ ವಿತರಣೆ ನಡೆಯಿತು. ಸಮಿತಿಯ ಪಕೀರ ಬೊಟ್ಟತ್ತಾರು ಮತ್ತು ಶಂಕರ ಪಡ್ಪುರವರು ಭಕ್ತಾಧಿಗಳನ್ನು ಸ್ವಾಗತಿಸಿ, ದೈವದ ಗಂಧ ಪ್ರಸಾದ ನೀಡಿ ಸತ್ಕರಿಸಿದರು. ಸ್ನೇಹ ಯುವಕ ಮಂಡಲ, ಸ್ನೇಹ ಮಹಿಳಾ ಮಂಡಲ ಪರ್ಪುಂಜ ಅಲ್ಲದೆ ಬ್ರಹ್ಮಶ್ರೀ ನವೋದಯ ಸ್ವಸಹಾಯ ಸಂಘ ಪಡ್ಪು, ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪರ್ಪುಂಜ ಪಡ್ಪು ಇತ್ಯಾದಿ ಸಂಘ ಸಂಸ್ಥೆಗಳ ಸಹಕಾರ ಸೇರಿದಂತೆ ಊರ ಹತ್ತು ಸಮಸ್ತರು ಸಹಕಾರ ನೀಡಿದ್ದರು.