ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ದ ಪ್ರತಿಷ್ಠಾ ವರ್ಧಂತಿ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರವು ಜನವರಿ 17 ರಂದು ದೇವಸ್ಥಾನ ದ ಸಭಾಂಗಣದಲ್ಲಿ ನಡೆಯಿತು. ದೇವಸ್ಥಾನ ದ ಆಡಳಿತಾಧಿಕಾರಿ ಮಹೇಶ್, ಕ್ಷೇತ್ರದ ತಂತ್ರಿ ಪ್ರೀತಂ ಪುತ್ತೂರಾಯ, ಡಾ. ಸುರೇಶ್ ಪುತ್ತೂರಾಯ, ಪ್ರಸನ್ನ ಕುಮಾರ್ ಮಾರ್ತ, ವಿಜಯ ಬಿ.ಎಸ್, ರವೀಂದ್ರ ರಾವ್, ಲಕ್ಮಣ್ ಬೈಲಾಡಿ, ಭೀಮ ಭಟ್,ಹರಿಣಿ ಪುತ್ತೂರಾಯ, ಶಿವಪ್ಪ ಮೂಲ್ಯ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು. ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ ವಂದಿಸಿದರು.