ಪುತ್ತೂರು: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಜ.೧೭ರಂದು ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಿತು.
ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕೆದಿಲದಿಂದ ಮಹಾದೈವಗಳ ಭಂಡಾರ ಆಗಮನ, ದೇವರ ಭೇಟಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ, ಉತ್ಸವ ಪಲ್ಲಕಿ ಉತ್ಸವ ಹಾಗೂ ಉಯ್ಯಾಲೋತ್ಸವ ನಡೆಯಿತು.
ಜ.18ರಂದು ರಥೋತ್ಸವ:
ಜ.೧೮ರಂದು ದೇವಳದಲ್ಲಿ ಬೆಳಿಗ್ಗೆ ದೇವರ ಬಲಿ, ಉತ್ಸವ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪೋತ್ಸವ, ಕ್ಷೇತ್ರ ಮಹಾದೈವ ರಕ್ತೇಶ್ವರಿ ಭೇಟಿ ಹಾಗೂ ದೇವರ ರಥೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.