ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಗ್ಲಿಟರ್ಸ್ಸ್ ಫ್ಯಾನ್ಸಿಯ ಸಹಸಂಸ್ಥೆ ಗ್ಲಿಟರ್ಸ್ಸ್ ಫೂಟ್ವೇರ್ ಜ.೧೮ರಂದು ಶುಭಾರಂಭಗೊಳ್ಳಲಿದೆ. ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ. ಅಸಯ್ಯದ್ ಮುಝಮಿಲ್ ತಂಙಳ್ ಕಾಸರಗೋಡುರವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಸಂಚಾರಿ ಠಾಣಾ ಎಸ್.ಐ ರಾಮ ನಾಯ್ಕ, ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ರಾಮಕೃಷ್ಣ ಪ್ರೌಡಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಸಹಿತ ಹಲವಾರು ಗಣ್ಯರು ಆಗಮಿಸಲಿದ್ಧಾರೆ. ಶುಭಾರಂಭದ ಪ್ರಯುಕ್ತ ಪ್ರತಿಯೊಂದು ಖರೀದಿ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಶಾಕಿರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.