HomePage_Banner
HomePage_Banner
HomePage_Banner
HomePage_Banner

ಬಂಟ್ವಾಳ: ವೇಶ್ಯಾವಾಟಿಕೆಯಲ್ಲಿ ಭಾಗಿ ಆರೋಪ: ನೆಕ್ಕಿಲಾಡಿ, ಚಿಕ್ಕಮುಡ್ನೂರಿನ ಇಬ್ಬರ ಸೆರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು:ಬಂಟ್ವಾಳದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ನೆಕ್ಕಿಲಾಡಿ ಮತ್ತು ಚಿಕ್ಕಮುಡ್ನೂರಿನ ಯುವಕರಿಬ್ಬರ ಸಹಿತ ೮ ಮಂದಿಯನ್ನು ಬಂಧಿಸಿದ್ದಾರೆ.

ಜ.೧೭ರಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್‌ರವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದರು.ಬಿ.ಸಿ ರೋಡ್‌ನ ಭಾರತ್ ಕಾಂಪ್ಲೆಕ್ಸ್‌ನ ತಳಭಾಗದಲ್ಲಿರುವ ಕೊಠಡಿಗೆ ದಾಳಿ ನಡೆಸಿ ಸದರಿ ಕೊಠಡಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ೫ ಜನ ಮಹಿಳೆಯರು ಹಾಗೂ ಪುತ್ತೂರು ನೆಕ್ಕಿಲಾಡಿ ನಿವಾಸಿ ಶರಣ್ (೨೮ವ.),ಚಿಕ್ಕಮೂಡ್ನೂರು ಗ್ರಾಮ ನಿವಾಸಿ ಕಿರಣ್ ಕೆ (೨೫ವ.)ಮತ್ತು ಬಂಟ್ವಾಳ ಕರಿಯಂಗಳದ ಭರತ್(೨೮ವ.)ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ರೂ.೪,೪೦೦ ನಗದು ಹಾಗೂ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.