ಪುತ್ತೂರು: ಬೈಕಿನಲ್ಲಿ ಗಾಂಜಾ ಸಾಗಾಟ ನಡೆಸುತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ ಘಟನೆ ಜ.18ರಂದು ನಡೆದಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ನಿವಾಸಿ ನವಾಜ್ (30) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ನವಾಜ್ ಬಳಿಯಿಂದ ಪೊಲಿಸರು ಸುಮಾರು 40 ಸಾವಿರ ಮೌಲ್ಯದ 2 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಜಂಬೂರಾಜ್ ಹಾಗೂ ಸಿಬ್ಬಂದಿಗಳು ಈ ಕಾರ್ಯಚರಣೆ ಭಾಗಿಯಾಗಿದ್ದಾರೆ. ನರಿಮೊಗ್ರು ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿ ಬೈಕನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಸೆರೆಯಾಗಿದ್ದಾನೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.