HomePage_Banner
HomePage_Banner
HomePage_Banner
HomePage_Banner

ಬೆಳಂದೂರು: ಮನೆಯಿಂದ ಚಿನ್ನಾಭರಣ ಕಳ್ಳತನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ಎಂಬಲ್ಲಿ ಮನೆಮಂದಿ ಮಲಗಿದ್ದ ವೇಳೆ‌ ಮೈಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ. ಬೆಳಂದೂರು ಗ್ರಾಮದ ಬನಾರಿ ನಿವಾಸಿ ಯಾಕೂಬ್ ಎಂಬವರ ಮನೆಯಿಂದ ಈ ಕಳ್ಳತನ ನಡೆದಿದೆ.

ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ಯಾಕೂಬ್ ಅವರ ಪತ್ನಿ ತಾಜುನ್ನಿಸಾ ಎಂಬುವವರ ಮನೆಯ ಹಿಂಬಾಗಿಲಿನ ಚಿಲಕವನ್ನು ಪಕ್ಕದಲ್ಲಿರುವ ಕಿಟಕಿ ಮುಖಾಂತರ ಯಾವುದೋ ಸಾಧನದಿಂದ ತೆರೆದು ಮನೆಯ ಒಳಗೆ ಪ್ರವೇಶಿಸಿ ಮಧ್ಯದ ಕೋಣೆಯಲ್ಲಿ ಮಲಗಿದ್ದ ತಾಜುನ್ನಿಸ ಅವರ ಕಾಲಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಕಾಲುಚೈನು ಹಾಗೂ ಪಕ್ಕದಲ್ಲಿದ್ದ ಅವರ ಮಗು ತೋಈಬಾ ಅವರ ಕುತ್ತಿಗೆಯಲ್ಲಿ ಸುಮಾರು 6 ಗ್ರಾಂ ತೂಕದ ಸಣ್ಣ ಪೆಂಡೆಂಟ್ ಇರುವ ಚಿನ್ನದ ಚೈನನ್ನು ಕಳವು ಮಾಡಿದ್ದು ಕಳವಾದ ಚಿನ್ನಾಭರಣಗಳು ಸುಮಾರು 5 ವರ್ಷಗಳ ಹಿಂದೆ ಖರೀದಿಸಿ ದಾಗಿದ್ದು ಅವುಗಳ ಮೌಲ್ಯ 88,000 ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.