ಪುತ್ತೂರು: ಮೋರಿಯ ಮೇಲೆ ಕಳಚಿಟ್ಟ ರೀತಿಯಲ್ಲಿ ಬಟ್ಟೆ ಬರೆಗಳು ಪತ್ತೆಯಾದ ಘಟನೆ ಜ.22ರಂದು ಬನ್ನೂರು ಕಟ್ಟೆ ಬಳಿಯಿಂದ ಪತ್ತೆಯಾಗಿದೆ. ಇದೊಂದು ಕಳ್ಳನ ಕೃತ್ಯ ಆಗಿರಬಹುದೆಂದು ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದಾರೆ. ಕಳ್ಳನ ಕೃತ್ಯವೋ ಅಥವಾ ಮದ್ಯಪಾನ ಮಾಡಿದ ವ್ಯಕ್ತಿಯ ಕೃತ್ಯವೋ ಎಂದು ತಿಳಿಯಬೇಕಷ್ಟೆ.