ಪುತ್ತೂರು: ಅನ್ಸಾರುಲ್ ಮುಸ್ಲಿಮೀನ್ ಯಂಗ್ಮೆನ್ಸ್ ಅಸೋಸಿಯೇಶನ್ ಕೋಲ್ಪೆ-ಇಡ್ಕಿದು ಇದರ ವತಿಯಿಂದ 7ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್ `ಇಷ್ಕೇ ಮದೀನ’ ಕಾರ್ಯಕ್ರಮ ಜ.23ರಂದು ಮಗ್ರಿಬ್ ನಮಾಜಿನ ಬಳಿಕ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಮರ್ಜಾನುತೈಬಾ ಬುರ್ದಾ ಫೌಂಡೇಶನ್ ಬೆಳ್ತಂಗಡಿ ತಂಡದವರಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು ಬುರ್ದಾ ಆಲಾಪನೆಯನ್ನು ಬದ್ಯಾರ್ ಜುಮಾ ಮಸೀದಿ ಖತೀಬ್ ಅನ್ಸಾರ್ ಸಖಾಫಿ ಮುಕ್ವೆ ನಿರ್ವಹಿಸಲಿದ್ದಾರೆ.
ಶಿಹಾನ್ ಉಳ್ಳಾಲರವರು ನಅತೇ ಶರೀಫ್ ಆಲಾಪನೆ ಮಾಡಲಿದ್ದು ಮುಹಾಝ್ ಕಾಟಿಪಳ್ಳ, ಮಾಸ್ಟರ್ ಮುಝಮ್ಮಿಲ್ ಆತೂರ್ ಹಾಗೂ ಸಲೀಮ್ ಜಾರಿಗೆಬೈಲ್ ಮದ್ಹ್ ಗಾನ ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.