HomePage_Banner
HomePage_Banner
HomePage_Banner
HomePage_Banner

ರಾಷ್ಟ್ರ ಮಟ್ಟದ ಕಬಡ್ಡಿ ತರಬೇತುದಾರ ಚಿದಾನಂದ ರೈ ಮದಕ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ರಾಜ್ಯ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ತರಬೇತುದಾರ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಿದಾನಂದ ರೈ ಮದಕ (64ವ.) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಜ. 21ರಂದು ರಾತ್ರಿ ನಿಧನರಾದರು.

ನೆಲ್ಯಾಡಿ ಪ್ರಾಥಮಿಕ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಕಡಬ ಪ್ರಾಥಮಿಕ ಶಾಲೆ, ನೂಜಿಬಾಳ್ತಿಲ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಸುದೀರ್ಘ ಅವಧಿಯಲ್ಲಿ ಪಾಣಾಜೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದ ಅವರು ಅನೇಕ ತಂಡಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಆಟವಾಡಿದ್ದರು. ಇವರು ತರಬೇತು ನೀಡಿದ ಕಬಡ್ಡಿ ಕ್ರೀಡಾಪಟುಗಳೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು. ಅನೇಕರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುವಾಗಿ ಮಿಂಚಿ ಅನೇಕ ಮಂದಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಣಾಜೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರಿಂದ ತರಬೇತು ಪಡೆದ ಮಕ್ಕಳು ರಾಷ್ಟ್ರಮಟ್ಟದವರೆಗೂ ಮಿಂಚಿದ್ದರು.


ಕೇಸರಿ ಮಿತ್ರವೃಂದ ಕೇಸರಿನಗರ ಮಿತ್ತಡ್ಕ ಇದರ ಆಶ್ರಯದಲ್ಲಿ ಪಾಣಾಜೆಯಲ್ಲಿ ನಡೆದಿದ್ದ ದಕ್ಷಿಣ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಇವರು ರಾಜ್ಯ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದರು. ಉತ್ತಮ ಅಥ್ಲೆಟ್ ಕೂಡಾ ಆಗಿದ್ದ ಇವರು ಹವ್ಯಾಸಿಯಾಗಿ ಯಕ್ಷಗಾನ ಮತ್ತು ನಾಟಕ ಕಲೆಗಳಲ್ಲಿಯೂ ಆಸಕ್ತಿ ಹೊಂದಿದ್ದರು.

ಮೃತರು ಪತ್ನಿ ಬೇಬಿ ರೈ, ರಾಜ್ಯಮಟ್ಟದ ಕ್ರೀಡಾಪಟುಗಳಾದ ಪುತ್ರ ಭರತ್‌ರಾಜ್, ಪುತ್ರಿ ಸ್ನೇಹ ಕುಮಾರಿ ಮತ್ತು ಸಹೋದರರಾದ ಶಂಕರ ರೈ ಮದಕ, ಚಂದ್ರಹಾಸ ರೈ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.