ಕಡಬ: ಎಲ್ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಟ್ಯೂಷನ್ ಸೆಂಟರ್ ‘ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ’ ಆಲಂಕಾರು ಶ್ರೀದುರ್ಗಾ ಟವರ್ಸ್ನ ನೆಲಮಹಡಿಯಲ್ಲಿ ಜ.೨೪ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಸಂಚಾಲಕ ಜನಾರ್ದನ ಬಿ.ಎಲ್.,ಹಾಗೂ ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತಾಯ ಕೋಡ್ಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕಚೇರಿ ಉದ್ಘಾಟಿಸಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ, ಆಲಂಕಾರು ಗ್ರಾ.ಪಂ.ಪಿಡಿಒ ಎ.ಜಗನ್ನಾಥ ಶೆಟ್ಟಿ, ಕೊಕ್ಕಡ ಸರಕಾರಿ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ದುಗ್ಗಪ್ಪ ಗೌಡ, ಆಲಂಕಾರು ಶ್ರೀದುರ್ಗಾ ಟವರ್ಸ್ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಖಲಾತಿ ಆರಂಭ:
ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ ಎಲ್ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಟ್ಯೂಷನ್ ನೀಡಲಾಗುವುದು. ಕಲಿಕೆಗೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿ ಸಂಸ್ಥೆಯಿದ್ದು ನುರಿತ ಮತ್ತು ವೃತ್ತಿಪರ ಶಿಕ್ಷಕರಿಂದ ಬೋಧನೆ, ನವೀನ ರೀತಿಯ ಕಲಿಕಾ ವಿಧಾನ, ಕ್ರಮಬದ್ಧ ಪಠ್ಯ ಯೋಜನೆ, ನಿಖರ ಫಲಿತಾಂಶದ ಭರವಸೆಯೊಂದಿಗೆ ಬೋಧಿಸಲಾಗುವುದು. ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ ೯೭೪೧೮೮೨೨೪೯(ರಾಘವೇಂದ್ರ ಮುಚ್ಚಿಂತಾಯ, ಪ್ರಾಂಶುಪಾಲರು) ಹಾಗೂ ೯೪೮೧೨೨೯೩೮೧(ಜನಾರ್ದನ ಬಿ.ಎಲ್.,ಸಂಚಾಲಕರು)ಗೆ ಸಂಪರ್ಕಿಸಬಹುದು ಎಂದು ಸಂಚಾಲಕರು ತಿಳಿಸಿದ್ದಾರೆ.