HomePage_Banner
HomePage_Banner
HomePage_Banner
HomePage_Banner

ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಸಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು:ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಆರೋಪಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದೆ. 
ಪುತ್ತೂರು ಸಾಮೆತ್ತಡ್ಕ ವೆಲೇರಿಯನ್ ಡಿಸೋಜ ಅವರ ಪುತ್ರ ಮೆಕ್ಸಿಮ್ ವಿಲ್‌ಫ್ರೆಡ್ ಡಿಸೋಜ ಅವರು ಶಿಕ್ಷೆಗೊಳಗಾಗಿರುವ ಆರೋಪಿಯಾಗಿದ್ದಾರೆ.ಮೆಕ್ಸಿಮ್ ವಿಲ್‌ಫ್ರೆಡ್ ಡಿ’ಸೋಜ ಅವರು ವಿಟ್ಲಮುಡ್ನೂರು ನಿವಾಸಿ ಶಶಿ ಭಟ್ ಎಂಬವರಿಗೆ ನೀಡಬೇಕಾಗಿದ್ದ ರೂ.80 ಸಾವಿರ ಹಣ ವಾಪಾಸ್ ನೀಡದೆ ಚೆಕ್ ನೀಡಿ ಕಳೆದ 6 ವರ್ಷಗಳಿಂದ ಸತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದ್ದು ಅವರು ನೀಡಿದ್ದ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಶಶಿ ಭಟ್ ಅವರು ಮೆಕ್ಸಿಮ್ ವಿಲ್‌ಫ್ರೆಡ್ ಡಿಸೋಜ ಅವರ ವಿರುದ್ಧ ನ್ಯಾಯಾಲಯಲ್ಲಿ ಖಾಸಗಿ ದೂರು ನೀಡಿದ್ದರು.ಆರೋಪಿ ಮೆಕ್ಸಿಮ್ ವಿಲ್‌ಫ್ರೆಡ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದಾಗ ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು.ಕಳೆದ ೨ ವರ್ಷಗಳಿಂದ ಗೋವಾ, ಮುಂಬಯಿ, ಬೆಂಗಳೂರು ಕಡೆಗಳಲ್ಲಿ ತಲೆಮರಸಿಕೊಂಡಿದ್ದರೆನ್ನಲಾದ ಆರೋಪಿಯು ವಾರದ ಹಿಂದೆ ಸಾಮೆತ್ತಡ್ಕ ಮನೆಗೆ ಬಂದಿದ್ದ ಸಮಯ ಪುತ್ತೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ಚೆಕ್ ಅಮಾನ್ಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯು ರೂ.೮೦ ಸಾವಿರ ದಂಡ ಪಾವತಿಸಬೇಕು, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.