ಪುತ್ತೂರು: ಆವರಣವಿಲ್ಲದ ಬಾವಿಗೆ ಯುವಕನೋರ್ವ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ವೀರಮಂಗಲದಲ್ಲಿ ಜ.22ರ ಸಂಜೆ ಬೆಳಕಿಗೆ ಬಂದಿದೆ.
ವೀರಮಂಗಲ ಬರೆರಾವು ದಿ.ಹುಕ್ರ ಎಂಬವರ ಪುತ್ರ ಕೂಲಿ ಕೆಲಸ ನಿರ್ವಹಿಸುತ್ತಿರುವ ಬಾಲಕೃಷ್ಣ(29ವ)ರವರು ಮೃತಪಟ್ಟವರು. ಬಾಲಕೃಷ್ಣ ಅವರು ಜ.21ರಂದು ಕೂಲಿ ಕೆಲಸ ಮುಗಿಸಿ ಸಂಜೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಜ.22ರಂದು ಸ್ಥಳಿಯವಾಗಿ ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಬಾಲಕೃಷ್ಣ ಅವರ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿತ್ತು.