HomePage_Banner
HomePage_Banner
HomePage_Banner
HomePage_Banner

ಕರುವೇಲು: ದ.ಕ.ಜಿಲ್ಲೆಯ ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಥಮ: ಶ್ರೀ ರಾಧಾಕೃಷ್ಣ ಭಜನಾ ತಂಡ ನೀರ್ಕೆರೆ ತೆಂಕ ಮಿಜಾರು,
  • ದ್ವಿತೀಯ: ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಉಜಿರೆ

  
ಉಪ್ಪಿನಂಗಡಿ: ಬಿಳಿಯೂರು-ಕರುವೇಲು ಶ್ರೀರಾಮ ಭಜನಾ ಮಂದಿರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಕರುವೇಲು ಒಕ್ಕೂಟದ ಸಹಯೋಗದೊಂದಿಗೆ ದ.ಕ.ಜಿಲ್ಲೆಯ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ಜ.೨೨ರಂದು ಸಂಜೆ ಕರುವೇಲು ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

ದ.ಕ.ಜಿಲ್ಲೆಯ ವಿವಿಧೆಡೆಗಳಿಂದ ಆಹ್ವಾನಿಸಿದ ಒಟ್ಟು ೧೬ ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ ಶ್ರೀ ರಾಧಾಕೃಷ್ಣ ಭಜನಾ ತಂಡ ನೀರ್ಕೆರೆ ತೆಂಕ ಮಿಜಾರು ಪ್ರಥಮ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಉಜಿರೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿವೆ. ಶ್ರೀರಾಮ ಭಜನಾ ಮಂಡಳಿ ಗುಡ್ಡೆಕೊಪ್ಪ ಸುರತ್ಕಲ್ ತೃತೀಯ ಹಾಗೂ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರಂಕಿ ಚತುರ್ಥ ಬಹುಮಾನ ಪಡೆದುಕೊಂಡಿದೆ. ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ನೃತ್ಯ ಭಜನಾಗುರು ರಮೇಶ್ ಕಲ್ಮಾಡಿ, ಪ್ರಜಾವಾಣಿ ವರದಿಗಾರ ನರೇಶ್‌ಕುಮಾರ್ ಸಸಿಹಿತ್ಲು ಹಾಗೂ ರಂಗಕರ್ಮಿ ಸದಾಶಿವ ಶಿವಗಿರಿ ಕಲ್ಲಡ್ಕರವರು ತೀರ್ಪುಗಾರರಾಗಿ ಸಹಕರಿಸಿದರು. ಸ್ಪರ್ಧೆಗೆ ಮೊದಲು ಕರುವೇಲು ಶ್ರೀ ರಾಮಭಜನಾ ಮಂಡಳಿ ಸದಸ್ಯರಿಂದ ನೃತ್ಯ ಭಜನೆ ಪ್ರಾತ್ಯಕ್ಷಿಕೆ ನಡೆಯಿತು.

ಉದ್ಘಾಟನೆ:
ದಾಸ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆಯವರು ದೀಪ ಬೆಳಗಿಸಿ ಭಜನಾ ಸ್ಪರ್ಧೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಜನೆಯಿಂದ ಭಗವಂತನ ಸಾಮಿಪ್ಯ ಸಿಗಲಿದೆ. ಇದೊಂದು ಭಕ್ತಿಯನ್ನು ಪ್ರಕಟ ಮಾಡಲು ಇರುವ ವೇದಿಕೆಯೂ ಆಗಿದೆ. ಕುಣಿತ ಭಜನೆಗೆ ಇನ್ನಷ್ಟೂ ಪ್ರೋತ್ಸಾಹ ಸಿಗಬೇಕೆಂಬ ನಿಟ್ಟಿನಲ್ಲಿ ಇಲ್ಲಿ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ. ಇದೊಂದು ಮಾದರಿಯಾಗಿ ಅನೇಕರಿಗೆ ಪ್ರೇರಣೆಯಾಗಲಿ ಎಂದರು. ಅತಿಥಿಗಳು ತೆಂಗಿನ ಗರಿ ಅರಳಿಸುವ ಮೂಲಕ ಭಜನಾ ಸ್ಪರ್ಧೆಗೆ ಚಾಲನೆ ನೀಡಿದರು. ನೃತ್ಯ ಭಜನಾ ಗುರು ರಮೇಶ್ ಕಲ್ಮಾಡಿ, ಪ್ರಜಾವಾಣಿ ವರದಿಗಾರ ನರೇಶ್‌ಕುಮಾರ್ ಸಸಿಹಿತ್ಲು, ರಂಗಕರ್ಮಿ ಸದಾಶಿವ ಶಿವಗಿರಿ ಕಲ್ಲಡ್ಕ, ಗೋಪಾಲಕೃಷ್ಣ ಪೈ ಕರಾಯ, ತನಿಯಪ್ಪ ನಾಯ್ಕ್ ಅಲುಂಗೂರು, ಪುಷ್ಪರಾಜ ಹೆಗ್ಡೆ ಸಸಿಹಿತ್ಲು, ವೇಣುಗೋಪಾಲ ನೋಂಡ ದಾಮಸ್‌ಕೋಡಿ, ಕರುವೇಲು ಶ್ರೀರಾಮ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು, ಬಿಳಿಯೂರು ಪೆರ್ನೆ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ರೋಹಿತ್ ಕುಮಾರ್ ಬಾಣಬೆಟ್ಟು, ಶ್ರೀದುರ್ಗಾಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮೋಹನದಾಸ್ ರೈ ದಾಮಸ್‌ಕೋಡಿ, ಕರುವೇಲು ಶ್ರೀರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಎಸ್.ಜಿ.ತಾರನಾಥ ಪಳಿಕೆ, ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ, ಕಾರ್ಯದರ್ಶಿ ಪ್ರಸಾದ್ ಪಚ್ಚಾಡಿ ಸುಪ್ರಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನಿಯಪ್ಪ ಪೂಜಾರಿ ಸ್ವಾಗತಿಸಿದರು. ಶ್ರೀರಾಮ ಭಜನಾ ಮಂಡಳಿ ಕಾರ್ಯದರ್ಶಿ ಪ್ರವೀಣ್ ಮಾಡತ್ತಾರು ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀದುರ್ಗಾಪೂಜೆಯು ನಡೆಯಿತು.


೧೬ ತಂಡಗಳು ಭಾಗಿ:

ಸ್ಪರ್ಧೆಯಲ್ಲಿ ಒಟ್ಟು ೧೬ ಭಜನಾ ತಂಡಗಳು ಭಾಗವಹಿಸಿದ್ದವು. ಮಂಜುಶ್ರೀ ಭಜನಾ ಮಂಡಳಿ ಕುತ್ಲೂರು, ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಒಬ್ಬೆಟ್ಟುಪಲ್ಕೆ ಕೊಡ್ಯಡ್ಕ, ಕೇಸರಿ ಕಲಾ ಭಜನಾ ಮಂಡಳಿ ಕೇಸರಿನಗರ ಬೆಟ್ಟಂಪಾಡಿ, ಶ್ರೀ ರಾಜಶ್ರೀ ಭಜನಾ ಮಂಡಳಿ ೩೪ನೇ ನೆಕ್ಕಿಲಾಡಿ ಅಂಬೆಲ, ಶ್ರೀ ಶಬರಿ ಭಜನಾ ಮಂಡಳಿ ಪಾದೆ ತೋಟತ್ತಡಿ, ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ, ಶ್ರೀರಾಮ ಭಜನಾ ಮಂಡಳಿ ಗುಡ್ಡೆಕೊಪ್ಪ, ಶ್ರೀರಾಮ ಭಜನಾ ಮಂಡಳಿ ತೆಂಕ ಎಡಪದವು, ರಾಧಾಕೃಷ್ಣ ಭಜನಾಮಂಡಳಿ ನೀರ್ಕರೆ, ಶ್ರೀರಾಮ ಭಜನಾ ಮಂಡಳಿ ಮುಜೂರುಕಾನ, ಗುರುರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ, ತುಳುನಾಡ ಭಜನಾ ಮಂಡಳಿ ಪಡ್ಪಿನಂಗಡಿ, ಬಾಲವಿಕಾಸ ಭಜನಾ ಮಂಡಳಿ ಹೊಸಬೆಟ್ಟ, ಸೋಮನಾಥೇಶ್ವರ ಭಜನಾ ಮಂಡಳಿ ಕಂಬೆಟ್ಟು, ಶ್ರೀರಾಮ ಭಜನಾಮಂಡಳಿ ರಾಮನಗರ ಕೋಟೆಕಣಿಯ ಭಜನಾ ತಂಡಗಳು ಭಾಗವಹಿಸಿದ್ದರು. ಒಟ್ಟು ೨೫ ಭಜನಾ ತಂಡಗಳು ಕುಣಿತ ಭಜನೆಯ ವಿಡಿಯೋ ಕ್ಲಿಪ್ಪಿಂಗ್ ಕಳಿಸಿದ್ದು ಈ ಪೈಕಿ ೧೬ ಭಜನಾ ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿ ಆಹ್ವನಿಸಲಾಗಿತ್ತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.