HomePage_Banner
HomePage_Banner
HomePage_Banner
HomePage_Banner

ಪಾಣಾಜೆ ರಣಮಂಗಲ ಜಾತ್ರೋತ್ಸವಕ್ಕೆ  ಆರ್ಲಪದವಿನಿಂದ ಹಸಿರು ಹೊರೆ ಕಾಣಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ : ಜಿ.ಎಸ್ ಹರೀಶ್ ಆರ್ಲಪದವು

ನಿಡ್ಪಳ್ಳಿ; ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವದಿ ಜಾತ್ರೋತ್ಸವದ ಪ್ರಯುಕ್ತ  ಜ.22 ರಂದು ಆರ್ಲಪದವಿನಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತ್ತು ಗ್ರಾಮಸ್ಥರ ವತಿಯಿಂದ ಆರ್ಲಪದವಿನಿಂದ ಮೆರವಣಿಗೆ ಮೂಲಕ ಸಮರ್ಪಿಸಲಾಯಿತು.  ಜ. 23 ರಂದು ದೇವಾಲಯದಲ್ಲಿ ಮಧ್ಯಾಹ್ನ ತುಲಾಭಾರ ಸೇವೆ, ಬಲಿ ಉತ್ಸವ,ಮಹಾಪೂಜೆ ನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಮತ್ತು ಊರ ಭಕ್ತಾದಿಗಳು ಪಾಲ್ಗೊಂಡರು.


ನಾಳೆ ದೇವಾಲಯದಲ್ಲಿ
ದೇವಾಲಯದಲ್ಲಿ ಬೆಳಿಗ್ಗೆ ಗಂಟೆ 10 ಕ್ಕೆ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ. ರಾತ್ರಿ ದೇವಾಲಯದಲ್ಲಿ ರಂಗ ಪೂಜೆ ನಂತರ ಶ್ರೀ ದೈವಗಳ ಕಿರುವಾಲು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಕೊಂಡು ಹೋಗಿ ಧ್ವಜಾರೋಹಣ ನಂತರ ದೈವಗಳಿಗೆ ತಂಬಿಲ ನಡೆಯಲಿದೆ




Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.