ಪುತ್ತೂರು: ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ 14ನೇ ವರ್ಷದ ಅರ್ಧ ಏಕಾಹ ಭಜನೆ ಜ.23ರಂದು ನಡೆಯಿತು. ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಅಶ್ವತ್ಥ ಪೂಜೆ ಜರಗಿತು. ಸಂಜೆ ಅರ್ಧ ಏಕಾಹ ಭಜನೆ ಮಂಗಳ, ರಾತ್ರಿ ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.