ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ನರಿಮೊಗರು, ಮುಂಡೂರು, ಶಾಂತಿಗೋಡು ಗ್ರಾಮ ವ್ಯಾಪ್ತಿಯನ್ನೊಳಗೊಂಡ ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇಲ್ಲಿನ ಸಂಘದ ಸಮಾಜ ಮಂದಿರದಲ್ಲಿ ಜ.೨೨ ರಂದು ಶ್ರೀ ದೇವಿ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯು ನಡೆಯಲಿರುವುದು.
ಪ್ರಧಾನ ಅರ್ಚಕರಾದ ನಾರಾಯಣ ನಾಯ್ಕ ಅಡೂರು ಹಾಗೂ ಪಾತ್ರಿ ನಾರಾಯಣ ನಾಯ್ಕ ಪೆರ್ಲರವರು ಶ್ರೀ ದೇವಿ ಮಹಾಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಮಹಾಲಿಂಗ ನಾಯ್ಕ, ಅಧ್ಯಕ್ಷ ಪರಮೇಶ್ವರ ನಾಯ್ಕ ಭಕ್ತಕೋಡಿ, ಪ್ರಧಾನ ಕಾರ್ಯದರ್ಶಿ ಸುಂದರ ನಾಯ್ಕ ಬರೆಕೋಡಿ, ಕೋಶಾಧಿಕಾರಿ ಯೋಗೀಶ್ ಪುಂಡಿಕಾಯಿ, ಉಪಾಧ್ಯಕ್ಷರಾದ ಶಿವಪ್ರಸಾದ್ ನಾಯ್ಕ ಬಜಪ್ಪಾಲ, ಪುಷ್ಪಾವತಿ ಪುಂಡಿಕಾಯಿ ಸಹಿತ ನೂರಾರು ಭಕ್ತರು ಪೂಜೆಯಲ್ಲಿ ಶ್ರದ್ಧಾಪೂರ್ವಕವಾಗಿ ಪಾಲ್ಗೊಂಡರು.